ಬುಧವಾರ, ನವೆಂಬರ್ 13, 2019
25 °C

25 ವರ್ಷದ ಗಂಡಾನೆ ಸಾವು

Published:
Updated:

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸೊಳ್ಳೆಪುರ ವಿಭಾಗದಲ್ಲಿ 25 ವರ್ಷದ ಗಂಡಾನೆ ಮೃತಪಟ್ಟಿದೆ.

ಅರಣ್ಯದಲ್ಲಿ ಎರಡು ಗಂಡಾನೆಗಳ ನಡುವಿನ ಕಾದಾಟದಿಂದ ಒಂದು ಆನೆ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ನಾರಾಯಣಸ್ವಾಮಿ ತಿಳಿಸಿದರು.

ಮೃತಪಟ್ಟ ಆನೆ ಸೊಂಡಿಲ ಬಳಿ ಗಾಯವಾಗಿದ್ದು, ಕಾದಾಟದಿಂದ ಮೃತಪಟ್ಟಿರುವುದಕ್ಕೆ ಇದು ಸಾಕ್ಷಿ. ಕಾಡಾನೆಯು ಅರಣ್ಯ ಗಡಿ ಭಾಗದಿಂದ 1 ಕಿ.ಮಿ. ಒಳಭಾಗದಲ್ಲಿ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆಯನ್ನು ಡಾ.ಮುಜಿಬ್ ರೆಹಮಾನ್ ನಡೆಸಿದರು.

ಸ್ಥಳಕ್ಕೆ ಎಸಿಎಫ್ ಪ್ರಸನ್ನ ಕುಮಾರ್, ವೀರನಹೊಸಹಳ್ಳಿ ವಲಯದ ಆರ್‌ಎಫ್‌ಒ ರವೀಂದ್ರ ಭೇಟಿ ನೀಡಿ ಪರಿಶೀಲಿಸಿದ್ದರು.

ಪ್ರತಿಕ್ರಿಯಿಸಿ (+)