ಶುಕ್ರವಾರ, ಜೂನ್ 18, 2021
27 °C

ಕಾಡಾನೆಗಳ ದಾಳಿ: 100 ಎಕರೆ ಮುಸುಕಿನ ಜೋಳ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು: ತಾಲ್ಲೂಕಿನ ನಾಗಾಪುರ ಪುನರ್ವಸತಿ ಕೇಂದ್ರ, ಹೊಸಪೆಂಜಳ್ಳಿ ಮತ್ತು ಗುರುಪುರ ಗ್ರಾಮಗಳಲ್ಲಿ ಕಾಡಾನೆ ದಾಳಿಗೆ ಮುಸುಕಿನಜೋಳ ಸಂಪೂರ್ಣ ನಾಶವಾಗಿದೆ.

ನಾಗರಹೊಳೆ ವೀರನಹೊಸಹಳ್ಳಿ ವಲಯದಿಂದ 9 ಕಾಡಾನೆ ಇರುವ ಹಿಂಡು ನಾಗಾಪುರ ಪುನರ್ವಸತಿ ಕೇಂದ್ರದ ಗುರುಪುರ ಭಾಗದಲ್ಲಿ 100 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಮುಸುಕಿನಜೋಳ ಧ್ವಂಸ ಮಾಡಿದೆ. ವಿಷಯ ತಿಳಿದ ಸ್ಥಳೀಯ ರೈತರು ಆನೆಗಳನ್ನು ಕಾಡಿಗಟ್ಟುವ ಪ್ರಯತ್ನ ನಡೆಸಿದರೂ ವಿಫಲವಾಯಿತು ಎಂದು ನಾಗಾಪುರ ಪುನರ್ವಸತಿ ಕೇಂದ್ರದ ನಿವಾಸಿ ಜೆ.ಕೆ.ಮಣಿ ತಿಳಿಸಿದ್ದಾರೆ.

ನಷ್ಟ: ಆನೆ ದಾಳಿಯಿಂದ ಹೊಸಪೆಂಜಳ್ಳಿ ರೈತ ನಾಗೇಗೌಡ, ನಲ್ಲೂರು ಪಾಲ ಗ್ರಾಮದ ಕೆಂಪಣ್ಣ, ನಾಗಾಪುರ ಪುನರ್ವಸತಿ ಕೇಂದ್ರದ ಕುಮಾರ, ಜಯಣ್ಣ, ಮಣಿ, ಪ್ರಭು, ಜೆ.ಕೆ ತಿಮ್ಮ ಇವರಿಗೆ ಸೇರಿದ ಫಸಲು ನಾಶವಾಗಿದೆ.

ಕಾಡಾನೆ ವೀರನಹೊಸಹಳ್ಳಿ ವಲಯದ ಪಾರೆ ಎಂಬಲ್ಲಿಂದ ಟಿಬೆಟ್ ಕ್ಯಾಂಪ್‌ನವರು ನಿರ್ಮಿಸಿರುವ ತಡೆಗೋಡೆ ದಾಟಿ ಹೊಲಕ್ಕೆ ದಾಳಿ ಇಟ್ಟಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅರಣ್ಯ ಇಲಾಖೆ ವೀರನಹೊಸಹಳ್ಳಿ ವಲಯದ ಅಧಿಕಾರಿ ರವೀಂದ್ರ ನೇತೃತ್ವ ದಲ್ಲಿ ಕಾಡಾನೆ ಅರಣ್ಯಕ್ಕೆ ಅಟ್ಟಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು