ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸರ್ಗಿಕ ಸೌಂದರ್ಯ ಉತ್ಪನ್ನಗಳಿವು

Last Updated 24 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮುಖದ ಅಲಂಕಾರ, ಚರ್ಮಕ್ಕೆ ಮೃದುತ್ವ ನೀಡುವ ಮಾಯಿಶ್ಚರೈಸಿಂಗ್‌, ಚರ್ಮದ ಸುಕ್ಕಾಗದಂತೆ ಬಳಸುವ ಲೋಶನ್‌, ಪೌಡರ್‌, ಪರ್ಫ್ಯೂಮ್‌, ಲಿಪ್‌ಸ್ಟಿಕ್‌, ಲಿಪ್‌ಬಾಮ್‌ಗಳು ಎಲ್ಲವೂ ನೈಸರ್ಗಿಕ ಉತ್ಪನ್ನಗಳಿಂದ ಮಾಡಿದಂಥವುಗಳು. ರಾಸಾಯನಿಕ ಮುಕ್ತವಾದವು. ಚರ್ಮಕ್ಕೆ ಹಿತವಾದ ನೈಸರ್ಗಿಕ ಸೌಂದರ್ಯವರ್ಧಕ ಉತ್ಪನ್ನಗಳನ್ನು ‘ಹರ್ಬಲ್‌ ರಾಗ’ ಕಂಪೆನಿ ಮೂಲಕ ಗೀತಾ ನಾಯಕ್‌ ಮಾರಾಟ ಮಾಡುತ್ತಿದ್ದಾರೆ.

ಒಂದೂವರೆ ವರ್ಷದ ಹಿಂದೆ ಕತ್ರಿಗುಪ್ಪೆಯ ಗೀತಾ ನಾಯಕ್‌ ಅವರು ನೈಸರ್ಗಿಕ ಸೌಂದರ್ಯ ಉತ್ಪನ್ನಗಳ ಹರ್ಬಲ್‌ ರಾಗ ಕಂಪೆನಿಯನ್ನು ಆರಂಭಿಸಿದರು. ಇವರು ನೈಸರ್ಗಿಕ ಉತ್ಪನ್ನಗಳಾದ ಅರಿಶಿನ, ಗುಲಾಬಿ ಜಲ, ಕೊಬ್ಬರಿ ಎಣ್ಣೆಗಳನ್ನು ಬಳಸಿ ಚರ್ಮದ ಆರೋಗ್ಯಕ್ಕೆ ಯಾವುದೇ ಹಾನಿಯಾಗದಂತೆ ಮುಖದ  ಕ್ರೀಮ್‌, ಮಾಯಿಶ್ಚರೈಸಿಂಗ್‌ ಕ್ರೀಮ್‌, ಸಾಬೂನು, ಶ್ಯಾಂಪೂಗಳನ್ನು ಮಾಡುತ್ತಿದ್ದಾರೆ.

ಒಣತ್ವಚೆ, ಎಣ್ಣೆ ತ್ವಚೆ, ಮೊಡವೆ, ಚರ್ಮದ ಅಲರ್ಜಿ...ಹೀಗೆ ಚರ್ಮದ ಗುಣಕ್ಕೆ ಹೊಂದಿಕೊಳ್ಳುವ ಸೌಂದರ್ಯವರ್ಧಕಗಳನ್ನು ತಯಾರಿಸುತ್ತಾರೆ.

ಗೀತಾ ಗೃಹಿಣಿ. ಈ ಹಿಂದೆ ಅವರು ವಿದೇಶದಲ್ಲಿ ಉದ್ಯೋಗದಲ್ಲಿದ್ದಾಗ ನೈಸರ್ಗಿಕ ಸೌಂದರ್ಯ ಉತ್ಪನ್ನಗಳನ್ನು ಮಾಡುವ ವಿಧಾನ ಹಾಗೂ ಅವುಗಳ ಮಾರುಕಟ್ಟೆ ಬೇಡಿಕೆಯನ್ನು ತಿಳಿದುಕೊಂಡಿದ್ದರು. ಅನಂತರ ಯುಟ್ಯೂಬ್‌ ಮೂಲಕ ಅದರ ಬಗ್ಗೆ ಹೆಚ್ಚು ಕಲಿತುಕೊಂಡು 2017ರಲ್ಲಿ ಹರ್ಬಲ್‌ ರಾಗವನ್ನು ಆರಂಭಿಸಿದರು. ಸದ್ಯಕ್ಕೆ ಇದನ್ನು ಒಂಟಿಯಾಗಿ ಮುನ್ನಡೆಸುತ್ತಿರುವ ಗೀತಾನಾಯಕ್‌ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಂಪೆನಿ ವಿಸ್ತರಿಸುವ ಮಹದಾಸೆ ಇಟ್ಟುಕೊಂಡಿದ್ದಾರೆ.

ಇವರು ಕೊಬ್ಬರಿ, ಸಾಸಿವೆ ಹೀಗೆ ಬೇರೆ ಬೇರೆ ರೀತಿಯ ಎಣ್ಣೆ, ಚರ್ಮದ ತ್ವಚೆಗೆ ಹಿತಕರವಾದ ಕೆಲ ವಸ್ತುಗಳನ್ನು ಬಳಸುತ್ತಾರೆ. ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿರುವ ಚಾರ್ಕೋಲ್‌ (ಕಲ್ಲಿದ್ದಲು), ತೆಂಗಿನ ಕಾಯಿ ಹಾಲು, ಅರಿಶಿನ, ಕಿತ್ತಳೆ ಸಾಬೂನು, ರೋಸ್‌ ಸಾಬೂನು, ಇದಲ್ಲದೇ ರೋಸ್‌ ಶ್ಯಾಂಪೂ, ಸ್ಟ್ರಾಬೆರಿ ಹೀಗೆ ಬೇರೆ ಬೇರೆ ಸುವಾಸನೆಯ ಸಾಬೂನು, ಶ್ಯಾಂಪೂಗಳು ಇವರಲ್ಲಿವೆ.

ಗೀತಾನಾಯಕ್‌ ಅವರು ಮಾಡಿದ ಸಾಬೂನುಗಳನ್ನು ನೋಡಿದರೆ ಥಟ್ಟನೆ ಕಣ್ಸೆಳೆಯುತ್ತದೆ. ಬಗೆ ಬಗೆ ವಿನ್ಯಾಸ. ಹೃದಯಾದಾಕೃತಿ, ಜ್ಯುವೆಲ್‌ ಬಾಕ್ಸ್‌ನಲ್ಲಿಟ್ಟ ಬಂಗಾರ, ರಾಣಿ, ಚಿಟ್ಟೆ, ರೈಲು ಹೀಗೆ  ವಿಭಿನ್ನ ಆಕೃತಿ ಮತ್ತು ವಿನ್ಯಾಸದ ಸಾಬೂನುಗಳು ಇವರಲ್ಲಿವೆ. ‘ನೈಸರ್ಗಿಕ ಸೌಂದರ್ಯವರ್ಧಕಗಳು ಅಂದರೆ ಜನ ಕುತೂಹಲದಿಂದ ಗಮನಿಸುತ್ತಾರೆ. ಆದರೆ ಈ ವಿಭಿನ್ನ ವಿನ್ಯಾಸಗಳು ಅವರಿಗೆ ಮೆಚ್ಚುಗೆಯಾಗಿ ಅವುಗಳನ್ನು ಕೊಂಡುಕೊಳ್ಳುತ್ತಾರೆ. ಮಾರುಕಟ್ಟೆಗಳಲ್ಲಿ ಬಳಸುವ ಅಚ್ಚುಗಳನ್ನು ಬಳಸಿ, ವಿನ್ಯಾಸ ಮಾಡುತ್ತೇನೆ’ ಎನ್ನುತ್ತಾರೆ ಗೀತಾ. ಸಾಬೂನು ಬೆಲೆ ₹20ರಿಂದ ಆರಂಭವಾದರೆ, ಶ್ಯಾಂಪು, ಕ್ರೀಂಗಳ ಬೆಲೆ ₹150ರಿಂದ ಆರಂಭವಾಗುತ್ತವೆ.

ಗೀತಾನಾಯಕ್‌ ಅವರು ಮಕ್ಕಳಿಗಾಗಿಯೂ ವಿಶೇಷ ಸಾಬೂನು ಹಾಗೂ ಲಿಪ್‌ಬಾಮ್‌ ಮಾಡಿದ್ದಾರೆ. ಇವೆಲ್ಲವೂ ಮಕ್ಕಳ ಚರ್ಮಕ್ಕೆ ಪೂರಕವಾದವು ಎಂದು ಅವರು ಹೇಳುತ್ತಾರೆ. ಮಕ್ಕಳನ್ನು ಈ ವಸ್ತುಗಳ ಕಡೆಗೆ ಆಕರ್ಷಿಸುವ ಸಲುವಾಗಿ ಚೋಟಾ ಭೀಮ್‌, ಬಾರ್ಬಿ ಡಾಲ್‌ ಅಥವಾ ಬಸ್ಸು, ಕಾರು ಹೀಗೆ ಪುಟಾಣಿಗಳ ಆಟದ ಪರಿಕರಗಳ ರೂಪ ಕೊಟ್ಟಿದ್ದಾರೆ. ಇವರು ತಮ್ಮ ಎಲ್ಲಾ ವಸ್ತುಗಳನ್ನು ಫೇಸ್‌ಬುಕ್‌ ಮೂಲಕ ಮಾರಾಟ ಮಾಡುತ್ತಾರೆ. ಗೀತಾನಾಯಕ್‌ ಕಾರ್‌ ಬೂಟ್‌ ಸೇಲ್‌ ಅನ್ನು ವ್ಯಾಪಾರದ ಮಾರ್ಗವನ್ನಾಗಿ ಬಳಸಿಕೊಂಡಿದ್ದಾರೆ.

ನೈಸರ್ಗಿಕ ಸೌಂದರ್ಯವರ್ಧಕ ಬೇಕಾದಲ್ಲಿ– 096208 79990. ಫೇಸ್‌ಬುಕ್‌ ಲಿಂಕ್‌– https://bit.ly/2qLPJvI

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT