ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ನಿರ್ಧಾರವೇ ಮೂರ್ಖತನದ್ದು: ಭೈರಪ್ಪ

7

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ನಿರ್ಧಾರವೇ ಮೂರ್ಖತನದ್ದು: ಭೈರಪ್ಪ

Published:
Updated:

ಮೈಸೂರು: ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶುರು ಮಾಡಬೇಕೆಂಬ ಸರ್ಕಾರದ ನಿರ್ಧಾರ ಮೂರ್ಖತನದ್ದು ಎಂದು ಸಾಹಿತಿ ಪ್ರೊ.ಎಸ್.ಎಲ್.ಭೈರಪ್ಪ ಹೇಳಿದರು.

ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ಖಾಸಗಿ ಶಾಲೆಗಳು ಹಣ ಮಾಡುವುದನ್ನೇ ವೃತ್ತಿಯಾಗಿ ಸ್ವೀಕರಿಸಿವೆ. ಸರ್ಕಾರವು ಅದೇ ದಾರಿಯಲ್ಲಿ ಸಾಗುತ್ತಿದೆ ಎಂದು ವಿಶ್ಲೇಷಿಸಿದರು.

ಶಬರಿಮಲೆಗೆ ಮಹಿಳೆಯರ ಪ್ರವೇಶ ಸಂಬಂಧಿಸಿದಂತೆ ನ್ಯಾಯಾಲಯದ‌ ಮೆಟ್ಟಿಲು ಹತ್ತುವುದೇ ಮೂರ್ಖತನದ ವಿಚಾರ. ನಂಬಿಕೆಗಳ ಆಧಾರದ ಮೇಲೆ ದೇವಸ್ಥಾನಗಳಲ್ಲಿ ಹಲವು ಆಚರಣೆಗಳಿರುತ್ತವೆ. ಅವನ್ನು ಪ್ರಶ್ನಿಸುವುದರಲ್ಲಿ ಅರ್ಥವಿಲ್ಲ ಎಂದರು.

ಕೇರಳದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಕಮ್ಯುನಿಸ್ಟ್ ನಂಬಿಕೆಗಳನ್ನು ಹೇರುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ವಿಷಾದದಿಂದ ಹೇಳಿದರು.

ಬರಹ ಇಷ್ಟವಾಯಿತೆ?

 • 19

  Happy
 • 1

  Amused
 • 3

  Sad
 • 1

  Frustrated
 • 13

  Angry

Comments:

0 comments

Write the first review for this !