ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕ ಮಕ್ಕಳಿದ್ದ ಶಾಲೆಗಳಲ್ಲೇ ಇಂಗ್ಲಿಷ್‌ ಮಾಧ್ಯಮ ಆರಂಭ

ಕನ್ನಡ ಮಾಧ್ಯಮ ಶಾಲೆ ಮುಚ್ಚಿಸುವ ಪ್ರಯತ್ನ: ಆರೋಪ
Last Updated 9 ಜೂನ್ 2019, 20:14 IST
ಅಕ್ಷರ ಗಾತ್ರ

ಮೈಸೂರು: ಹೆಚ್ಚು ಮಕ್ಕಳು ನೋಂದ ಣಿಯಾಗುವ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನೇ ಆಯ್ಕೆ ಮಾಡಿಕೊಂಡು, ಅಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಶುರು ಮಾಡುವ ಮೂಲಕ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಿಸುವ ಪ್ರಯತ್ನ ನಡೆದಿದೆ ಎಂದು ಕನ್ನಡ ಪರ ಸಂಘಟನೆಗಳು ಆರೋಪಿಸಿವೆ.

ಜಿಲ್ಲೆಯಲ್ಲಿ ಒಟ್ಟು 45 ಸರ್ಕಾರಿ ಶಾಲೆಗಳಲ್ಲಿ ಈ ವರ್ಷದಿಂದ ಇಂಗ್ಲಿಷ್‌ ಮಾಧ್ಯಮ ಶುರುವಾಗಿದೆ. ಅಲ್ಲದೇ, 12 ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಎಲ್‌ಕೆಜಿ, 1ನೇ ತರಗತಿಗಳು ಶುರುವಾಗಿವೆ. ಈವರೆಗೆ ಒಟ್ಟು 863 ಮಕ್ಕಳು ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ನೋಂದಾಯಿಸಿಕೊಂಡಿದ್ದಾರೆ. ಆದರೆ, ಈ ಶಾಲೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ಕೇವಲ 148 ಮಕ್ಕಳು ದಾಖಲಾಗಿರುವುದು ಕನ್ನಡ ಭಾಷಾ ಪ್ರಿಯರಲ್ಲಿ ಅಸಮಾಧಾನ ಉಂಟುಮಾಡಿದೆ.

ಯಾವ ಯಾವ ಶಾಲೆಗಳಲ್ಲಿ 2018–19ನೇ ಸಾಲಿನಲ್ಲಿ ಮಕ್ಕಳ ಸಂಖ್ಯೆ 300ಕ್ಕಿಂತ ಹೆಚ್ಚು ಇರುವ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಶುರು ಮಾಡಲು ಆಯ್ಕೆ ಮಾಡಿಕೊಳ್ಳಲಾಗಿದೆ. ಕಡಿಮೆ ಇರುವ ಕಡೆ ತೆರೆದಿಲ್ಲ. ನಗರದ ಮಂಚೇಗೌಡನ ಕೊಪ್ಪಲಿನ ಶಾಲೆಯಲ್ಲಿ 300 ಮಕ್ಕಳಿದ್ದಾರೆ. ಮೇಟಗಳ್ಳಿ ಸರ್ಕಾರಿ ಶಾಲೆಯಲ್ಲಿ 359 ಮಕ್ಕಳಿದ್ದಾರೆ. ಗೌಸಿಯಾ ನಗರದ ಸರ್ಕಾರಿ ಶಾಲೆಯಲ್ಲಿ 416 ಮಕ್ಕಳಿದ್ದಾರೆ. ಕುವೆಂಪುನಗರದ ಸರ್ಕಾರಿ ಶಾಲೆಯಲ್ಲಿ 215 ಮಕ್ಕಳಿದ್ದಾರೆ. ಈ ಶಾಲೆಗಳಲ್ಲೇ ಸರ್ಕಾರ ಇಂಗ್ಲಿಷ್ ಮಾಧ್ಯಮವನ್ನು ತೆರೆದಿದೆ.

‘ಅತ್ಯಂತ ಕಡಿಮೆ ಮಕ್ಕಳಿರುವ ಕೃಷ್ಣರಾಜ ಸರ್ಕಾರಿ ಶಾಲೆಯಲ್ಲಿ 30 ಮಕ್ಕಳು, ಲಕ್ಷ್ಮೀಪುರಂ 40, ಕನ್ನೇಗೌಡನಕೊಪ್ಪಲು 43, ಕುಕ್ಕರಹಳ್ಳಿ ಸರ್ಕಾರಿ ಶಾಲೆಯಲ್ಲಿ 30 ಮಕ್ಕಳಿದ್ದಾರೆ. ಈ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮವನ್ನು ಶುರು ಮಾಡಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿದ್ದರೆ ಅದು ಸರ್ಕಾರದ ಸಾಧನೆಯಾಗಿರುತ್ತಿತ್ತು. ಹಾಗಾಗಿ, ಇದು ಸಾಧನೆಯೇ ಅಲ್ಲ’ ಎಂದು ಕನ್ನಡ ಕ್ರಿಯಾ ಸಮಿತಿಯ ಕಾರ್ಯದರ್ಶಿ ಸ.ರ.ಸುದರ್ಶನ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT