ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ದಂಪತಿಯಿಂದ ಪರಿಸರ ಜಾಗೃತಿ

Last Updated 6 ಜೂನ್ 2022, 3:09 IST
ಅಕ್ಷರ ಗಾತ್ರ

ನಾಗಮಂಗಲ: ವಿಶ್ವ ಪರಿಸರ ದಿನ ದಂದು ವಿವಾಹವಾದ ನವ ದಂಪತಿ ಗಿಡ ನೆಡುವ ಮೂಲಕ ಪರಿಸರ ಜಾಗೃತಿಯನ್ನು ಮೂಡಿಸಿದರು.

ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಭಾನುವಾರ ದಾಪಂತ್ಯ ಜೀವನಕ್ಕೆ ಕಾಲಿಟ್ಟ ತಾಲ್ಲೂಕಿನ ಕುಂಟಾ ನಕೊಪ್ಪಲು ಗ್ರಾಮದ ರಘು ಮತ್ತು ಬಂಡಳ್ಳಿ ಗ್ರಾಮದ ಉಮಾ ಕಲ್ಯಾಣ ಮಂಟಪದ ಮುಂಭಾಗ ಗಿಡ ನೆಟ್ಟರು.

ವರ ರಘು ಮಾತನಾಡಿ, ಜಾಗತಿಕ ತಾಪಮಾನ ಹೆಚ್ಚುತ್ತಿರುವ ಸಮಯದಲ್ಲಿ ಪ್ರತಿಯೊಬ್ಬರೂ ಗಿಡ ಮರಗಳನ್ನು ನೆಡುವ ಮೂಲಕ ಪರಿಸರವನ್ನು ಸಂರಕ್ಷಿಸಬೇಕು. ಮದುವೆ ವಾರ್ಷಿಕೋತ್ಸವ, ಜನ್ಮದಿನ ಸೇರಿದಂತೆ ವಿಶೇಷ ದಿನಗಳಲ್ಲಿ ಒಂದೊಂದು ಗಿಡ ನೆಡುತ್ತಾ ಪರಿಸರಕ್ಕೆ ಉಡುಗೊರೆಯಾಗಿ ನೀಡಿದರೆ ಕನಿಷ್ಠ 100 ಗಿಡಗಳನ್ನು ನೆಟ್ಟು ಪೋಷಿಸಲು ಸಾಧ್ಯ ಎಂದರು.

ಮದುವೆಗೆ ಬಂದಿದ್ದವರಿಗೆ ಸೀತಾಫಲ ಹಣ್ಣಿನ ಗಿಡವನ್ನು ಉಡುಗೊರೆಯಾಗಿ ನೀಡಲಾಯಿತು. ಪ್ರತಿ ವರ್ಷ ವಿವಾಹ ವಾರ್ಷಿಕೋತ್ಸವಕ್ಕೆ ಗಿಡವನ್ನು ನೆಟ್ಟು ಬೆಳೆಸುತ್ತೇವೆ ಎಂದು ಪ್ರತಿಜ್ಞೆ ಮಾಡಿದರು.

ಸ್ವಾಸ್ಥ್ಯ ಜೀವನ ಮಾರ್ಗ ಯೋಗ ಪ್ರತಿಷ್ಠಾನದ ಸಂಸ್ಥಾಪಕ ಲಕ್ಷ್ಮಣ್ ಜೀ, ಯೋಗಪಟುಗಳಾದ ಸತೀಶ್, ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT