ಗುರುವಾರ , ಸೆಪ್ಟೆಂಬರ್ 19, 2019
21 °C

ದಸರಾ: ಈಶ್ವರ ಆನೆ ವಾಪಸ್‌

Published:
Updated:
Prajavani

ಮೈಸೂರು: ದಸರಾ ಗಜಪಡೆಯಲ್ಲಿದ್ದ ಈಶ್ವರ ಆನೆಯನ್ನು ವಾಪಸ್ ಶಿಬಿರಕ್ಕೆ ಕಳುಹಿಸಲಾಗುತ್ತಿದೆ. ನಗರದ ಪರಿಸರಕ್ಕೆ ಹೊಂದಿಕೊಳ್ಳದ ಕಾರಣ ಅರಣ್ಯಾಧಿಕಾರಿಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ತಾಲೀಮು ನಡೆಸುವ ಸಂದರ್ಭ ಈಶ್ವರ ಎರಡು ಮೂರು ಸಲ ಗಲಿಬಿಲಿಕೊಂಡಿತ್ತು. ಅರಮನೆ ಆವರಣದಲ್ಲಿ ಸೋಮವಾರ ಗಜಪಡೆಯ ಇನ್ನೊಂದು ಆನೆ ಧನಂಜಯನ ಜತೆ ಜಗಳವಾಡಿತ್ತು.

‘ಜಂಬೂ ಸವಾರಿ ವೇಳೆ ಯಾವುದೇ ಲೋಪ ಸಂಭವಿಸಬಾರದು ಎಂದು ಸಚಿವರು ಹೇಳಿದ್ದಾರೆ. ಆದ್ದರಿಂದ ಈಶ್ವರ ಆನೆಯನ್ನು ವಾಪಸ್ ಕಳುಹಿಸಿ, ಬೇರೊಂದು ಆನೆಯನ್ನು ತರಲಾಗುವುದು’ ಎಂದು ಡಿಸಿಎಫ್‌ ಅಲೆಕ್ಸಾಂಡರ್‌ ತಿಳಿಸಿದರು.

ದುಬಾರೆ ಶಿಬಿರದ ಈಶ್ವರ ಆನೆಯನ್ನು (49 ವರ್ಷ) ಇದೇ ಮೊದಲ ಬಾರಿಗೆ ದಸರಾ ಉತ್ಸವಕ್ಕೆ ಅಯ್ಕೆ ಮಾಡಲಾಗಿತ್ತು. ಈ ಆನೆ ಆ.22 ರಂದು ಮೊದಲ ತಂಡದಲ್ಲಿ ಮೈಸೂರಿಗೆ ಬಂದಿತ್ತು. 

Post Comments (+)