ಒಟ್ಟಾರೆಯಾಗಿ 41 ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರಲ್ಲಿ 15 ಫ್ಲ್ಯಾಟ್‌ಗಳು, 17 ಕಚೇರಿಗಳು, 1 ತೋಟದ ಮನೆ, 1 ಶಾಪಿಂಗ್ ಮಾಲ್ ಸೇರಿವೆ. ಅಲ್ಲದೆ, ಮಹಾರಾಷ್ಟ್ರದ ನಾಸಿಕ್, ನಾಗ್ಪುರ, ಪನ್ವೇಲ್ ಮತ್ತು ತಮಿಳುನಾಡಿನ ವಿಲ್ಲುಪುರಂನಲ್ಲಿ ಒಟ್ಟು 231 ಎಕರೆ ವಿಸ್ತೀರ್ಣದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.