ಅಸ್ವಾಳು: ಆಕಸ್ಮಿಕ ಬೆಂಕಿಗೆ 2 ಎಕರೆ ಕಬ್ಬು ನಾಶ

7

ಅಸ್ವಾಳು: ಆಕಸ್ಮಿಕ ಬೆಂಕಿಗೆ 2 ಎಕರೆ ಕಬ್ಬು ನಾಶ

Published:
Updated:
Prajavani

ಹುಣಸೂರು: ಅಸ್ವಾಳು ಗ್ರಾಮದ ರೈತ ಶಿವರಾಜ್ ಅವರ ಕಬ್ಬಿನ ಗದ್ದೆಗೆ ಭಾನುವಾರ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಸಂಪೂರ್ಣ ನಾಶವಾಗಿದೆ.

ಕಬ್ಬು ಕಟಾವಿಗೆ ಬಂದಿತ್ತು. ಬೆಂಕಿ ಬಿದ್ದಿರುವುದನ್ನು ಗಮನಿಸಿದ ಅಕ್ಕಪಕ್ಕದ ರೈತರು ಪಂಪ್‌ಸೆಟ್‌ ಮೂಲಕ ನೀರು ಹಾಯಿಸಿದರು. ಆದರೆ, ಬೆಂಕಿಯು ನಿಯಂತ್ರಣಕ್ಕೆ ಬರಲಿಲ್ಲ.

ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಆದರೆ, ಗದ್ದೆ ಪೂರ್ಣ ಪ್ರಮಾಣದಲ್ಲಿ ಸುಟ್ಟುಹೋದ ಬಳಿಕ ಅಗ್ನಿಶಾಮಕ ದಳದವರು ಬಂದರು. ಇದರಿಂದ ಯಾವುದೇ ಅನುಕೂಲವಾಗಲಿಲ್ಲ ಎಂದು ರೈತ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಅಸ್ವಾಳು ಶಂಕರೇಗೌಡ ತಿಳಿಸಿದರು.

ಬೆಂಕಿಯಿಂದಾಗಿ ಶಿವಕುಮಾರ್‌ ಅವರಿಗೆ ಅಂದಾಜು ₹4 ಲಕ್ಷ ನಷ್ಟವಾಗಿದೆ. ಅವರು ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದಾರೆ. ಅವರಿಗೆ ರಾಜ್ಯ ಸರ್ಕಾರವು ಪರಿಹಾರ ನೀಡಬೇಕು. ಇಲ್ಲವೇ ಅವರ ಕೃಷಿ ಸಾಲವನ್ನು
ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !