ವಾರ್ಡ್‌ ಅಭಿವೃದ್ಧಿಗೆ ಮೊದಲ ಆದ್ಯತೆ

7

ವಾರ್ಡ್‌ ಅಭಿವೃದ್ಧಿಗೆ ಮೊದಲ ಆದ್ಯತೆ

Published:
Updated:
Deccan Herald

ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲ 65 ವಾರ್ಡ್‌ಗಳ ಸದಸ್ಯರನ್ನು ಪರಿಚಯಿಸುವ ಪ್ರಯತ್ನವನ್ನು ‘ಪ್ರಜಾವಾಣಿ’ ಮಾಡುತ್ತಿದೆ. ಮೆಟ್ರೊ ಸಂಚಿಕೆಯಲ್ಲಿ ನಗರಪಾಲಿಕೆ ಸದಸ್ಯರ ಸಂದರ್ಶನ ಇರಲಿದೆ. ವಾರ್ಡ್‌ಗಳ ಅಭಿವೃದ್ಧಿಗೆ ಅವರು ಕಟ್ಟಿಕೊಂಡಿರುವ ಕನಸುಗಳ ಬಗ್ಗೆ ಮುಕ್ತವಾಗಿ ಇಲ್ಲಿ ವಿಚಾರ ಹಂಚಿಕೊಳ್ಳಲಿದ್ದಾರೆ.

* ನಗರಪಾಲಿಕೆ ಚುನಾವಣೆಯಲ್ಲಿ ನೀವು ಗೆಲ್ಲಲು ಸಹಾಯ ಮಾಡಿದ ಪ್ರಮುಖ ಅಂಶಗಳೇನು?

ನನ್ನ ಆಯ್ಕೆಗೆ ಮುಖ್ಯವಾಗಿ ಸಹಾಯ ಮಾಡಿದ್ದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಜನಪ್ರಿಯ ಕಾರ್ಯಕ್ರಮಗಳು. ನಾನು ಜನಪರವಾಗಿದ್ದ ನನ್ನ ಅವರೊಂದಿಗಿನ ಒಡನಾಟ. ಒಂದು ವರ್ಷದಲ್ಲಿ ನಾನು ಪಾಲಿಕೆ ಸದಸ್ಯನಾಗಿ ಮಾಡಿದ ಕೆಲಸ ಸಹಾಯಕ್ಕೆ ಬಂದಿತು. ಪಕ್ಕದ ವಾರ್ಡಿನಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ನಮಗೂ ಸಹಾಯ ಮಾಡುತ್ತಾರೆ ಎಂದು ಜನರು ನನ್ನ ಮೇಲೆ ನಂಬಿಕೆ ಇಟ್ಟು ಮತ ಹಾಕಿದರು.

ಎಲ್ಲರೊಂದಿಗೆ ನಾನು ವಿಶ್ವಾಸದಿಂದ ಇದ್ದೆ. ಸುಖ– ದುಃಖಗಳಲ್ಲಿ ನಾನು ಭಾಗಿಯಾಗುತ್ತಿದ್ದೆ. ನಾನು ನಗರಪಾಲಿಕೆ ಸದಸ್ಯ ಮಾತ್ರವಲ್ಲ, ನಿಮ್ಮ ಮನೆ ಮಗ ಎಂದು ನಾನು ಹೇಳುತ್ತಿದ್ದೆ. ಈ ನನ್ನ ಭಾವನೆ ನನ್ನ ಕೈ ಹಿಡಿಯಿತು. ಬಿಜೆಪಿ ಹಾಗೂ ಕಾಂಗ್ರೆಸ್ಸಿನವರು ನನ್ನನ್ನು ಸೋಲಿಸಲು ಎಷ್ಟೇ ಪ್ರಯತ್ನಪಟ್ಟರೂ ಅದು ಫಲಿಸಲಿಲ್ಲ.

* ನಿಮ್ಮ ವಾರ್ಡಿನ ಪ್ರಮುಖ ಸಮಸ್ಯೆಗಳೇನು? ಬಗೆಹರಿಸಲು ಹೇಗೆ ಪ್ರಯತ್ನಿಸುವಿರಿ?

ಮುಖ್ಯವಾಗಿ ಇಲ್ಲಿ ಒಳಚರಂಡಿ ವ್ಯವಸ್ಥೆಯ ಸಮಸ್ಯೆಯಿದೆ. ಇಲ್ಲಿ ಪೈಪುಗಳು ತುಂಬ ಸಣ್ಣವಿವೆ. ವಾರ್ಡಿನಲ್ಲಿ ರಸ್ತೆ ಮಾತ್ರ ಅಂದವಾಗಿದ್ದರೆ ಸಾಲದು, ಒಳಚರಂಡಿ ವ್ಯವಸ್ಥೆ ಸರಿಯಾಗಿ ಇರಬೇಕು. ಮನೆಯೊಳಗೆ ನೀರು ನುಗ್ಗುತ್ತಿದ್ದರೆ ಸಮಸ್ಯೆಯ ತೀವ್ರತೆ ಜನರನ್ನು ಹೈರಾಣಾಗಿಸುತ್ತದೆ. ನಾನು ಹಿಂದಿನ ಸಾಲಿನಲ್ಲಿ ಪಾಲಿಕೆ ಸದಸ್ಯನಾಗಿದ್ದಾಗ ₹ 50 ಲಕ್ಷ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ನವೀಕರಿಸಿದ್ದೆ. ಈಗಲೂ ನನ್ನ ಆದ್ಯತೆ ಇದೇ ಆಗಿದೆ. ಇಲ್ಲಿನ ಒಳಚರಂಡಿ ವ್ಯವಸ್ಥೆಯನ್ನು ಸಂಪೂರ್ಣ ಸರಿಪಡಿಸುವುದು. ಜತೆಗೆ, ರಸ್ತೆ, ಮೂಲಸೌಕರ್ಯಗಳನ್ನು ಉತ್ತಮಗೊಳಿಸುವುದು.

ಅಲ್ಲದೇ, ಇಲ್ಲಿ ತುಂಬಾ ಸರಗಳ್ಳತನ ಆಗುತ್ತಿದೆ. ಇದನ್ನು ತಡೆಗಟ್ಟಲು ಸಿಸಿಟಿವಿ ಕ್ಯಾಮೆರಾ ಅಳವಡಿಸುತ್ತಿದ್ದೇವೆ. ಇಲ್ಲಿ ವಿದೇಶಿಗರು, ನಮ್ಮ ಮಹಿಳೆಯರಿಗೆ ರಕ್ಷಣೆ ಬೇಕು. ಅಪರಾಧ ತಡೆಗಟ್ಟುವುದು ಆದ್ಯತೆಯಾಗಬೇಕು. ಜತೆಗೆ ಉದ್ಯಾನಗಳ ಅಭಿವೃದ್ಧಿಗೂ ಮಹತ್ವ ನೀಡಲಾಗುವುದು.

* ವಾರ್ಡ್ ಪುನರ್ ಹಂಚಿಕೆಯಿಂದ ಜನ ಸಂಪರ್ಕ ಕಷ್ಟವಾಗಿದೆಯೇ?

ನನಗೆ ಇಂತಹ ಯಾವ ಸಮಸ್ಯೆಯೂ ಆಗಲಿಲ್ಲ. ವಾರ್ಡ್‌ ಹೊಸತಾದರೂ ಇಲ್ಲಿನ ಜನ ನನಗೆ ಹೊಸಬರಲ್ಲ. ಎಲ್ಲರೂ ನನ್ನ ಸ್ನೇಹಿತರೇ. ಅಲ್ಲದೇ, ಎರಡು ಬಾರಿ ಹಿಂದಿನ ಚುನಾವಣೆಯಲ್ಲಿ ನಾನು ಅಲ್ಪಮತಗಳಿಂದ ಇಲ್ಲಿ ಸೋತಿದ್ದೆ. ಒಡನಾಟ ಇದ್ದ ಕಾರಣ ನಾನು ಮತ ಕೇಳಲು ಸಹಾಯವಾಯಿತು. ಮುಂದೆಯೂ ನನ್ನ ಸೇವೆ ಈ ಜನರಿಗಾಗಿ ಮುಂದುವರಿಯಲಿದೆ.

* ಅಧಿಕಾರಿಗಳ ಸಹಕಾರ ಪಡೆದು ಅಭಿವೃದ್ಧಿ ಕಾರ್ಯ ನಡೆಸುವುದು ಸುಲಭವೇ? ಇದಕ್ಕೆ ತಮ್ಮ ಕಾರ್ಯತಂತ್ರವೇನು?

ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ನಿಯಂತ್ರಿಸುವುದೇ ದೊಡ್ಡ ಸವಾಲು. ಭ್ರಷ್ಟಾಚಾರಿಗಳನ್ನು ಗುರುತಿಸಿ ಪ್ರಾಮಾಣಿಕರಿಗೆ ಬೆಲೆ ಕೊಡುವುದು ನನ್ನ ಉದ್ದೇಶ.

ಎಲ್ಲವನ್ನೂ ನಿಭಾಯಿಸಿ ಅಭಿವೃದ್ಧಿ ಕಾರ್ಯಕ್ಕೆ ಗಮನ ನೀಡಲಾಗುವುದು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !