ಹೂಗಳ ಚಿತ್ತಾರ, ಮೈಸೂರಲ್ಲೇ ಲೋಟಸ್‌ ಮಹಲ್‌

7

ಹೂಗಳ ಚಿತ್ತಾರ, ಮೈಸೂರಲ್ಲೇ ಲೋಟಸ್‌ ಮಹಲ್‌

Published:
Updated:

ಮೈಸೂರು: ದಸರೆಗೆ ಮೆರುಗು ನೀಡಲು ಅರಮನೆಯ ನಗರಿಯಲ್ಲಿ ಹೂಗಳ ಲೋಕವೇ ಸೃಷ್ಟಿಯಾಗಿದೆ. ಹೂಗಳಲ್ಲಿಯೇ ವಿವಿಧ ಕಲಾಕೃತಿಗಳು ಒಡಮೂಡಿವೆ. ನವದೆಹಲಿಯಲ್ಲಿರುವ ಲೋಟಸ್‌ ಮಹಲ್‌ಅನ್ನು ಮೈಸೂರಲ್ಲೇ ಕಾಣಬಹುದು...

ತೋಟಗಾರಿಕಾ ಇಲಾಖೆ ವತಿಯಿಂದ ಕುಪ‍್ಪಣ್ಣ ಉದ್ಯಾನದಲ್ಲಿ ಬುಧವಾರ ಆರಂಭವಾದ ಫಲ–ಪುಷ್ಪಪ್ರದರ್ಶನದ ಚಿತ್ತಾರವಿದು. ನೂತನವಾಗಿ ನಿರ್ಮಿಸಿರುವ ಗಾಜಿನ ಮನೆಯಲ್ಲಿ ಅರಳಿರುವ ಲೋಟಸ್‌ ಮಹಲ್‌ ಈಗ ಎಲ್ಲರ ಆಕರ್ಷಣೀಯ ಕೇಂದ್ರಬಿಂದುವಾಗಿದೆ. ಗುಲಾಬಿ ಹಾಗೂ ಇತರ ಹೂ ಬಳಸಿ ಇದನ್ನು ನಿರ್ಮಿಸಲಾಗಿದೆ.

1,200 ಚದರ ಮೀಟರ್‌ ವಿಸ್ತೀರ್ಣದಲ್ಲಿ ಅಲಂಕಾರ ಮಾಡಲಾಗಿದೆ. ಇದಲ್ಲದೇ, ಹೂಗಳಲ್ಲಿ ರಚಿಸಿರುವ ಅಶೋಕಸ್ತಂಭ, ಅಮರ್‌ ಜವಾನ್‌ ಸ್ತಂಭ, ಕಾಫಿ ಮಗ್‌–ಲೋಟ, ಆನೆಗಾಡಿ, ಡಾಲ್ಫಿನ್ಸ್‌, ಪೆಂಗ್ವಿನ್‌ ಕಲಾಕೃತಿ ಜನರ ಕಣ್ಮನ ಸೆಳೆಯುತ್ತಿವೆ. ಹೂವಿನ ಅಲಂಕಾರದಿಂದ ಬಲರಾಮ ದ್ವಾರ, ಗುಲಾಬಿ ಹೂಗಳಿಂದ ಫಿರಂಗಿ ಗಾಡಿ ಸಿದ್ಧಪಡಿಸಲಾಗಿದೆ.

ಅ.21ರವರೆಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನ ಹಾಗೂ ಗಾಜಿನ ಮನೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬುಧವಾರ ಚಾಲನೆ ನೀಡಿದರು. ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ, ಗಾಜಿನ ಮನೆಯನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಉದ್ಘಾಟಿಸಬೇಕಿತ್ತು. ಆದರೆ, ಅವರು ಬರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !