ರುಚಿ, ಶುಚಿ, ಸ್ವಾದದ ಆಹಾರ ಮೇಳ: ಗಬಗಬನೆ ಇಡ್ಲಿ ತಿಂದ ನಾರಿಯರು

7

ರುಚಿ, ಶುಚಿ, ಸ್ವಾದದ ಆಹಾರ ಮೇಳ: ಗಬಗಬನೆ ಇಡ್ಲಿ ತಿಂದ ನಾರಿಯರು

Published:
Updated:
Deccan Herald

ಮೈಸೂರು: ಪ್ರತಿ ದಿನ ಮನೆಯ ಊಟವನ್ನೇ ತಿಂದು ಬೇಸರವೆನಿಸಿದ್ದ ನಾಲಿಗೆಗೆ ಸವಿರುಚಿಯ ಭೋಜನ ಸವಿಯುವ ಅವಕಾಶ ಅಲ್ಲಿತ್ತು. ಬಗೆ ಬಗೆ ಖಾದ್ಯಗಳು, ತರಹೇವಾರಿ ರುಚಿಯ ತಿನಿಸುಗಳು ಅಲ್ಲಿದ್ದವು. ಯಾವುದನ್ನು ಮೊದಲು ಸವಿಯುವುದು, ಬಳಿಕ ಯಾವುದನ್ನು ತಿನ್ನುವುದು ಎಂಬ ಗೊಂದಲ ಅಲ್ಲಿದ್ದವರ ಮನದಲ್ಲಿ ಮೂಡಿತ್ತು.

ಹೀಗೆ ಬಹು ಬಗೆಯ ಖಾದ್ಯಗಳ ರುಚಿ ನೋಡಲು ಅವಕಾಶ ಸಿಕ್ಕಿದ್ದು ದಸರಾ ಆಹಾರಮೇಳದಲ್ಲಿ.

ಈ ಬಾರಿಯೂ ಎರಡೂ ಕಡೆ ಆಹಾರ ಮೇಳ ಆಯೋಜನೆಗೊಂಡಿದ್ದು, ವಿಶೇಷ ಖಾದ್ಯಗಳ ತಯಾರಿಯ ಪ್ರಾತ್ಯಕ್ಷಿಕೆಯೂ, ಸ್ಪರ್ಧೆಯೂ ಅಲ್ಲಿ ಏರ್ಪಾಡಾಗಿತ್ತು.

ಗಬಗಬನೆ ಖಾಲಿಯಾದ ಇಡ್ಲಿ:

ಮಹಿಳೆಯರಿಗಾಗಿ ಗುರುವಾರ ಇಡ್ಲಿ ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ತಿನ್ನುವುದರಲ್ಲೂ ಪುರುಷರಿಗಿಂತ ನಾವೇನೂ ಕಡಿಮೆ ಇಲ್ಲ ಎಂಬುದನ್ನು ಸಾಧಿಸಿ ತೋರಿಸಲು ಹಲವರು ಅಲ್ಲಿ ಬಂದಿದ್ದರು. ತಟ್ಟೆಯಲ್ಲಿ ಹಾಕಿದ್ದ ಇಡ್ಲಿಯನ್ನು ಒಂದೆರಡು ನಿಮಿಷದಲ್ಲಿ ಗಬಗಬನೆ ತಿಂದು ಮುಗಿಸಿದರು. ಹೋಟೆಲ್‌ನಲ್ಲಿ ತಿಂಡಿ ಸವಿಯುವಾಗ ಅದು ಬಟ್ಟೆ ಮೇಲೆ ಬಿದ್ದೀತು ಎಂದು ಹೆಚ್ಚು ಎಚ್ಚರ ವಹಿಸುತ್ತಿದ್ದವರೂ ಸ್ಪರ್ಧೆಯಲ್ಲಿ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಇದನ್ನು ಪ್ರೇಕ್ಷಕರೂ ಅಚ್ಚರಿಯಿಂದಲೇ ನೋಡಿದರು.

ಸ್ಪರ್ಧಿಗಳಿಗೆ 200 ಗ್ರಾಂ.ನ 6 ಇಡ್ಲಿ ನೀಡಲಾಗಿತ್ತು. ಪಡುವಾರಹಳ್ಳಿಯ ಲಲಿತಾ ಪುಟ್ಟೇಗೌಡ ಅವರು 6 ಇಡ್ಲಿಯನ್ನು ತಿನ್ನುವ ಮೂಲಕ ಪ್ರಥಮ ಸ್ಥಾನ ಪಡೆದರು. ರಾಜಶ್ರೀ ದ್ವಿತೀಯ ಹಾಗೂ ಕಾಂತಮಣಿ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಅಲ್ಲದೇ ಬೆಳಿಗ್ಗೆ ಏರ್ಪಡಿಸಿದ್ದ ಒಲೆ ರಹಿತ ಅಡುಗೆ ಸ್ಪರ್ಧೆಯಲ್ಲಿ 7 ಸ್ಪರ್ಧಿಗಳು ‍ಪಾಲ್ಗೊಂದ್ದು, ಪ್ರತಿ ಸ್ಪರ್ಧಿಗೂ 30 ನಿಮಿಷ ಕಾಲಾವಕಾಶ ನೀಡಲಾಗಿತ್ತು. ಉಮಾ ಶಿವಕುಮಾರ್ ಅವರು ತಯಾರಿಸಿದ ಫ್ರೂಟ್‌ ಮತ್ತು ವೆಜ್‌ ಸಲಾಡ್‌ ಪ್ರಥಮ ಬಹುಮಾನಕ್ಕೆ ಪಾತ್ರವಾಯಿತು. ರೂಪಾ ಅವರು ಇಟಾಲಿಯನ್‌ ಶೈಲಿಯ ಫ್ರೂಟ್‌ ಮತ್ತು ವೆಜಿಟಬಲ್‌ ಸಲಾಡ್‌ ತಯಾರಿಸಿ ದ್ವಿತೀಯ ಹಾಗೂ ಶೃತಿ ಅವರು ಸಿರಿ ಧಾನ್ಯ ಹಾಗೂ ಮೊಳಕೆ ಕಾಳುಗಳಿಂದ ಇಟಾಲಿಕ್‌ ಶೈಲಿಯ ಮೇಥಿ ಹಾಗೂ ಮಿಕ್ಸ್‌ಡ್‌ ಸಲಾಡ್‌ ತಯಾರಿಸಿ ತೃತೀಯ ಸ್ಥಾನ ಗೆದ್ದುಕೊಂಡರು.

ಅತ್ತೆ ಸೊಸೆ ವಿಭಾಗದಿಂದ ನಡೆಯಬೇಕಿದ್ದ ಬದನೆಕಾಯಿ ಹಾಗೂ ಎಣಗಾಯಿ ಪಲ್ಯ ತಯಾರಿಕೆಗೆ ಸ್ಪರ್ಧಿಗಳಿಲ್ಲದೆ ರದ್ದಾಯಿತು.

ಬಿರಿಯಾನಿ ದರ್ಬಾರ್: ಎರಡನೇ ದಿನದ ಆಹಾರ ಮೇಳದಲ್ಲಿ ಬಗೆ–ಬಗೆಯ ಬಿರಿಯಾನಿಯ ಘಮಲು ಪ್ರವಾಸಿಗರನ್ನು ಸೆಳೆಯುತ್ತಿತ್ತು. ಚಿಕನ್‌ ಬಿರಿಯಾನಿ, ಬಂಬೂ ಬಿರಿಯಾನಿ, ಚಿಕನ್ ಧಮ್‌ ಬಿರಿಯಾನಿ ಹಾಗೂ ಮಡಕೆ ಬಿರಿಯಾನಿಗೆ ಬೇಡಿಕೆ ಹೆಚ್ಚಾಗಿತ್ತು. ಈ ನಡುವೆ ದಾವಣಗೆರೆ ಬೆಣ್ಣೆ ದೋಸೆ, ಧಾರವಾಡದ ಪೇಡಾ ಹಾಗೂ ತಂಪು ಪಾನೀಯ ಕುಡಿದು ಹಸಿವನ್ನೂ ದಾಹವನ್ನೂ ತಣಿಸಿಕೊಂಡರು.

* ಈ ರೀತಿಯ ಸ್ಪರ್ಧೆಗಳಲ್ಲಿ ಮಹಿಳೆಯರು ಭಾಗವಹಿಸುವುದರಿಂದ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ
-ಲಲಿತಾ ಪುಟ್ಟೇಗೌಡ, ಪಡುವಾರಹಳ್ಳಿಯ ನಿವಾಸಿ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !