ಶನಿವಾರ, ಆಗಸ್ಟ್ 13, 2022
24 °C
ಹಂಚ್ಯಾ: ಪಶು ಚಿಕಿತ್ಸಾ ಘಟಕ ಉದ್ಘಾಟಿಸಿದ ಶಾಸಕ ಜಿ.ಟಿ.ದೇವೇಗೌಡ

ಹುಟ್ಟೂರು ಅಭಿವೃದ್ಧಿಗೆ ಮುಂದಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ವಿದ್ಯಾವಂತರು ತಮ್ಮ ಹುಟ್ಟೂರು, ಹೆತ್ತವರನ್ನು ಎಂದೆಂದೂ ಮರೆಯಬಾರದು. ತಮ್ಮ ಮೂಲ ನೆಲೆಯ ಅಭಿವೃದ್ಧಿಗೆ ಮುಂದಾಗಬೇಕು’ ಎಂದು ಶಾಸಕ ಜಿ.ಟಿ.ದೇವೇಗೌಡ ಮನವಿ ಮಾಡಿದರು.

ತಾಲ್ಲೂಕಿನ ಹಂಚ್ಯಾ ಗ್ರಾಮದಲ್ಲಿ ಸೋಮವಾರ ಪಶು ಚಿಕಿತ್ಸಾ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ‘ನಿಮ್ಮೂರಿನ ನಂದೀಶ್ ಹಂಚೆ ಹುಟ್ಟೂರಿನ ಅಭಿವೃದ್ಧಿಗೆ ಮುಂದಾಗಿದ್ದಾರೆ. ನಾನು ಮಾಡಬೇಕಾದ ಕೆಲಸವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಮೂಲಕ ಮಾಡಿಸಿದ್ದಾರೆ’ ಎಂದರು.

ಗ್ರಾಮದ ಆದಿಜಾಂಬವ ಸಮುದಾಯ ಭವನಕ್ಕೆ ಗ್ರಾ.ಪಂ.ನಿಂದ ₹ 2 ಲಕ್ಷ ಅನುದಾನ ನೀಡುವಂತೆ ಸೂಚಿಸಿದ ಶಾಸಕರು, ಪಶು ಚಿಕಿತ್ಸಾ ಘಟಕಕ್ಕೆ ಗುರುತಿಸಿರುವ ಜಾಗದಲ್ಲಿ ಅತ್ಯಾಧುನಿಕವಾಗಿ ಕಟ್ಟಡ ನಿರ್ಮಿಸಲು ಅಗತ್ಯ ಸಹಕಾರ ನೀಡುವೆ ಎಂದು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ನಂದೀಶ್ ಹಂಚೆ ಪ್ರಾಸ್ತಾವಿಕವಾಗಿ ಮಾತನಾಡಿ ‘ಯಡಿಯೂರಪ್ಪ ಪುತ್ರ ವಿಜಯೇಂದ್ರ ಸಹಕಾರದೊಂದಿಗೆ ಇಲ್ಲಿಗೆ ಪಶು ಚಿಕಿತ್ಸಾ ಘಟಕ ತಂದಿರುವೆ. ಗ್ರಾಮದ ರಸ್ತೆ ಅಭಿವೃದ್ಧಿಗೆ ₹ 1 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರ ಅದಕ್ಕೂ ಚಾಲನೆ ಸಿಗಲಿದೆ. ಗ್ರಾಮಸ್ಥರ ಸಹಕಾರವಿರಲಿ’ ಎಂದರು.

ಜಿ.ಪಂ.ಸದಸ್ಯರಾದ ಮಾದೇಗೌಡ, ತಾ.ಪಂ.ಸದಸ್ಯೆ ಚಿಕ್ಕತಾಯಮ್ಮ ತಮ್ಮೇಗೌಡ, ತಾ.ಪಂ. ಇಒ ಕೃಷ್ಣಕುಮಾರ್, ಪಶು ಇಲಾಖೆಯ ಜಂಟಿ ನಿರ್ದೇಶಕ ಪ್ರಸಾದಮೂರ್ತಿ, ಉಪ ನಿರ್ದೇಶಕ ಡಾ.ಅಜಿತ್ ಕುಮಾರ್, ಸಹಾಯಕ ನಿರ್ದೇಶಕ ಡಾ.ಸುರೇಶ್, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಕೆ.ಎಸ್.ಸಣ್ಣಸ್ವಾಮಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಮಂಜು, ಕುಮಾರಸ್ವಾಮಿ, ಮಾಜಿ ಸದಸ್ಯರಾದ ಬಸವರಾಜು, ಚೆನ್ನಯ್ಯ, ಜಯಣ್ಣ, ಜೋಗಿ ಸಿದ್ದಯ್ಯ, ಹಂಚ್ಯಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ತಮ್ಮೇಗೌಡ, ಕಾರ್ಯದರ್ಶಿ ಎಚ್.ಎಸ್.ರಾಮಚಂದ್ರ ಮತ್ತಿತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು