ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗೆ ಉಚಿತ ಚಾಲನಾ ತರಬೇತಿ

ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಯುವ ಚಿಂತನ ಫೌಂಡೇಷನ್‌ನಿಂದ ಕಾರ್ಯಕ್ರಮ
Last Updated 5 ಫೆಬ್ರುವರಿ 2021, 11:24 IST
ಅಕ್ಷರ ಗಾತ್ರ

ಮೈಸೂರು: ಯುವ ಚಿಂತನ ಫೌಂಡೇಷನ್‌ ವತಿಯಿಂದ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಉಚಿತ ತ್ರಿಚಕ್ರ ವಾಹನ ಚಾಲನಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಹಿಳೆಯರಿಗಾಗಿ ಫೆ. 22ರಿಂದ 30 ಮಂದಿ ಮಹಿಳೆಯರಿಗಾಗಿ ಈ ತರಬೇತಿ ಆಯೋಜಿಸಲಾಗಿದ್ದು, ಉಚಿತವಾಗಿಯೇ ಚಾಲನಾ ಪರವಾನಗಿಯನ್ನೂ ದೊರಕಿಸಿಕೊಡಲಾಗುತ್ತದೆ. ತರಬೇತಿಯ ನಂತರ ಮಹಿಳೆಯರು ತಮ್ಮ ಇಚ್ಛಾನುಸಾರ ಪ್ರಯಾಣಿಕ ಆಟೊ, ಸರಕುಸಾಗಣೆ ಆಟೊಗಳನ್ನು ಪಡೆಯಲು ಸಂಬಂಧಪಟ್ಟ ಹಣಕಾಸು ಸಂಸ್ಥೆಗಳಿಂದ ನೆರವನ್ನು ಪಡೆಯಲು ಮಾರ್ಗದರ್ಶನ ನೀಡಲಾಗುವುದು ಎಂದು ಫೌಂಡೇಷನ್‌ನ ಸಂಸ್ಥಾಪಕಿ ಅನುಪಮಾಗೌಡ ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರಿನಲ್ಲಿ ಈಗಾಗಲೇ 50 ಮಂದಿ ಮಹಿಳೆಯರಿಗೆ ತರಬೇತಿ ನೀಡಲಾಗಿದ್ದು, ಇವರಲ್ಲಿ 36 ಜನರು ಕೆಲಸ ಮಾಡುತ್ತಿದ್ದಾರೆ. ಸುಮ್ಮನೇ ತರಬೇತಿ ಪಡೆಯಲು ಬರುವವರಿಗೆ ಆದ್ಯತೆ ನೀಡಲಾಗದು. ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವವರಿಗಾಗಿ ಮಾತ್ರವೇ ಈ ತರಬೇತಿ ನೀಡಲಾಗುತ್ತಿದೆ ಎಂದರು.

ತರಬೇತಿಯ ನಂತರ ಮಹಿಳೆಯರು ಪ್ರವಾಸೋದ್ಯಮ, ವಿತರಣಾ ಸಹಾಯಕಿ, ಸರಕು ಸಾಗಣೆ, ಮೊಬೈಲ್ ಜಾಹೀರಾತು ವಾಹನ ಚಲನೆ ಸೇರಿದಂತೆ ತ್ರಿಚಕ್ರ ವಾಹನ ಚಾಲನೆಯಲ್ಲಿ ಉದ್ಯೋಗವಕಾಶಗಳನ್ನು ಪಡೆಯಬಹುದು ಎಂದು ಅವರು ಮಾಹಿತಿ ನೀಡಿದರು.

ತರಬೇತಿ ಪಡೆಯಲು ಇಚ್ಛಿಸುವವರು ಆಧಾರ್‌ಕಾರ್ಡ್, ಪ್ಯಾನ್‌ಕಾರ್ಡ್‌, ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಭಾವಚಿತ್ರ, ಯಾರಿಂದಲಾದರೂ ಶಿಫಾರಸ್ಸು ಪತ್ರ ತರಬೇಕು. ಮಾಹಿತಿಗೆ ಮೊ: 6364270234, ವಾಟ್ಸ್‌ಆ್ಯಪ್‌ ಸಂಖ್ಯೆ 9620134493, ಮೇಲ್ ಐಡಿ info@yuvachintana.org ಸಂಪರ್ಕಿಸಬಹುದು ಎಂದರು.

ತರಬೇತಿ ಪಡೆದ ಮಾಲಿನಿ ಮಾತನಾಡಿ, ‘ಫೌಂಡೇಷನ್‌ ವತಿಯಿಂದ ತರಬೇತಿ ಪಡೆದು, ಇದೀಗ ಆಟೊ ಚಾಲಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ತರಬೇತಿಯಿಂದ ಸಾಧ್ಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT