ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ಉಚಿತ ಹಾಲು ಮಾರಾಟಕ್ಕೆ, ಪ್ರಕರಣ ದಾಖಲು

Last Updated 12 ಏಪ್ರಿಲ್ 2020, 5:02 IST
ಅಕ್ಷರ ಗಾತ್ರ
ADVERTISEMENT
""

ಮೈಸೂರು: ಉಚಿತವಾಗಿ ವಿತರಿಸಬೇಕಿದ್ದ ಹಾಲಿನ ಪ್ಯಾಕೇಟ್‌ಗಳನ್ನು ಮಾರಾಟ ಮಾಡುತ್ತಿದ್ದ ನಂದಿನಿ ಹಾಲಿನ ಮಳಿಗೆಯೊಂದರ ಮೇಲೆ ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕರಾದ ಕೆ.ಎಂ.ಮಹದೇವಸ್ವಾಮಿ ಅವರು ಭಾನುವಾರ ದಾಳಿ ನಡೆಸಿದ್ದಾರೆ.

ಇಂತಹ ಪ್ಯಾಕೇಟ್ ಮಾರಾಟ ಮಾಡುತ್ತಿದ್ದ ಮಂಡಿ ಮೊಹಲ್ಲಾದ ನಂದಿನಿ ಹಾಲಿನ ಬೂತ್‌ನ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಉಚಿತವಾಗಿ ವಿತರಣೆ ಮಾಡಲು ಎಂದು ಪ್ಯಾಕೇಟ್ ಮೇಲೆ ಬರೆದಿರಲಾಗುತ್ತದೆ. ಇಂತಹ ಹಾಲನ್ನು ಗ್ರಾಹಕರು ಖರೀದಿಸಬಾರದು ಎಂದು ಮಹದೇವಸ್ವಾಮಿ ತಿಳಿಸಿದ್ದಾರೆ.

ಉಚಿತವಾಗಿ ಹಾಲನ್ನು ಪಡೆದ ಕೆಲವು ಜನರು ಕಡಿಮೆ ಬೆಲೆಗೆ ಹಾಲು ಮಾರಾಟ ಮಳಿಗೆಗಳಿಗೆ ನೀಡಿದ್ದರು. ಇಂತಹ ಹಲವು ಹಾಲಿನ ಪ್ಯಾಕೇಟ್‌ಗಳು ನಗರದ ಕೆಲವು ಮಳಿಗೆಗಳಲ್ಲಿ ಮಾರಾಟವಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.

ಹಾಲು ಮಾರಾಟಕ್ಕಿಲ್ಲ ಎಂದು ಮುದ್ರಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT