ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಾಪುರ: ಹಾಡಿಯಲ್ಲಿ ಶೌಚಾಲಯ ನಿರ್ಮಿಸಿದ ಫ್ರಾನ್ಸ್‌ ವಿದ್ಯಾರ್ಥಿಗಳು

Last Updated 29 ಜುಲೈ 2022, 3:56 IST
ಅಕ್ಷರ ಗಾತ್ರ

ಧರ್ಮಾಪುರ: ಸಮೀಪದ ಬಲ್ಲೇನಹಳ್ಳಿ ಆದಿವಾಸಿ ಹಾಡಿ ನಿವಾಸಿಗಳಿಗೆ ಫ್ರಾನ್ಸ್‌ನ ಇಎಸ್‌ಟಿಪಿ ವಿಶ್ವವಿದ್ಯಾನಿಲಯದ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ರೋಸ್, ಓಷನ್, ಲಿಯಾ ಮತ್ತು ಟೀಯೋ ಎಂಬುವರು ಶೌಚಾಲಯ ಹಾಗೂ ಸ್ನಾನದ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ.

ಪ್ಯಾರಿಸ್‌ನ ಹಿಲಾಪ್ ಸಂಸ್ಥೆ ಹಾಗೂ ಭಾರತದಎಫ್ಎಸ್ಎಲ್ ಸಂಸ್ಥೆ ಮೂಲಕ ಬಲ್ಲೇನಹಳ್ಳಿಗೆ ಬಂದಿರುವ ವಿದ್ಯಾರ್ಥಿಗಳು 45 ದಿನಗಳವರೆಗೆ ವಾಸವಿದ್ದರು. ಹಳ್ಳಿ ಜನರ ಆಚಾರ– ವಿಚಾರ, ಸಂಸ್ಕೃತಿ, ಭಾಷೆ, ಆಹಾರ ಪದ್ಧತಿ, ಜೀವನ ಶೈಲಿ ಬಗ್ಗೆ ತಿಳಿದುಕೊಂಡರು. ಗ್ರಾಮದ ಸಮಸ್ಯೆಗಳನ್ನು ಅರಿತ ಅವರು ಸ್ನಾನದ ಮನೆ ಹಾಗೂ ಶೌಚಾಲಯವನ್ನು ಸ್ವತಃ ಮುಂದೆ ನಿಂತು ನಿರ್ಮಿಸಿದ್ದರು. ಶೌಚಾಲಯದ ಗೋಡೆ ಮೇಲೆ ಸ್ವಚ್ಛತೆ ಕುರಿತಾದ ಚಿತ್ರಗಳನ್ನು ಬಿಡಿಸುವ ಮೂಲಕ ಅರಿವು ಮೂಡಿಸಿದ್ದಾರೆ.

ಮಧ್ಯಾಹ್ನದ ವೇಳೆ ಹಾಡಿಯ ಶಾಲಾ ಮಕ್ಕಳಿಗೆ ಇಂಗ್ಲಿಷ್ ಭಾಷೆಯನ್ನು ಕಲಿಸುತ್ತಿದ್ದರು. ಶಾಲೆಯ ಗೋಡೆಗಳ ಮೇಲೆ ಅಂದವಾದ ಚಿತ್ರಗಳನ್ನು ಬಿಡಿಸಿದ್ದರು.

‘2013ರಿಂದ ಇಎಸ್‌ಟಿಪಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ತಂಡ ಈ ಹಳ್ಳಿಗೆ ಬಂದು ಕೈಲಾದ ಸೇವೆ ಮಾಡುತ್ತಾರೆ. ಇದುವರೆಗೂ ಒಟ್ಟು 40ಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದ್ದಾರೆ. 2020 ಮತ್ತು 2021ರಲ್ಲಿ ಕೋವಿಡ್‌ನಿಂದಾಗಿ ಅವರು ಬಂದಿರಲಿಲ್ಲ’ ಎಂದು ಎಫ್ಎಸ್ಎಲ್ ಸಂಸ್ಥೆಯ ಮೈಸೂರು ಸಂಯೋಜಕ ಮಂಜುನಾಥ್ ತಿಳಿಸಿದರು.

‘ಫ್ರಾನ್ಸ್‌ ವಿದ್ಯಾರ್ಥಿಗಳು ಮಕ್ಕಳಿಗೆ ಇಂಗ್ಲಿಷ್‌ ಹೇಳಿಕೊಟ್ಟರು. ಕಲಿಕಾ ಹಾಗೂ ಕ್ರೀಡಾ ಸಾಮಗ್ರಿಗಳನ್ನು ನೀಡಿದರು’ ಎಂದು ಶಿಕ್ಷಕ ಆದರ್ಶ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT