ಇಂಧನ ಜಾಗೃತಿ ಮೂಡಿಸುವ ಶ್ಯಾಮಸುಂದರ್

ಬುಧವಾರ, ಜೂನ್ 19, 2019
28 °C
ಸುಸ್ಥಿರ ತಂತ್ರಜ್ಞಾನ ಬಳಸಿ ಪರಿಸರ ಉಳಿಸುವಂತೆ ಶ್ರಮಿಸುವ ಪ್ರಾಧ್ಯಾಪಕ

ಇಂಧನ ಜಾಗೃತಿ ಮೂಡಿಸುವ ಶ್ಯಾಮಸುಂದರ್

Published:
Updated:
Prajavani

ಮೈಸೂರಿನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್ (ಎನ್‌ಐಇ) ಕಾಲೇಜಿನ ಮೆಕ್ಯಾನಿಕಲ್‌ ವಿಭಾಗದ ಪ್ರಾಧ್ಯಾಪಕ ಎಸ್‌.ಶ್ಯಾಮಸುಂದರ್‌ ಅವರು ನವೀಕರಿಸಬಲ್ಲ ಇಂಧನ ಹಾಗೂ ಸುಸ್ಥಿರ ತಂತ್ರಜ್ಞಾನದ ಅಳವಡಿಕೆ ಬಗ್ಗೆ ಜಾಗೃತಿ, ಅರಿವು ಮೂಡಿಸುತ್ತಿದ್ದಾರೆ. ಇವರದು ಮಾತಿನ ಅರಿವಲ್ಲ; ಬದಲಿಗೆ, ಪ್ರಾಯೋಗಿಕವಾಗಿ ಸಾಬೀತು ಮಾಡುವ ಸಂಕಲ್ಪ.

ಕಾಲೇಜಿನ ಆವರಣದಲ್ಲೇ ಸ್ಥಾಪಿಸಿರುವ ನವೀಕರಿಸಬಲ್ಲ ಇಂಧನ ಹಾಗೂ ಸುಸ್ಥಿರ ತಂತ್ರಜ್ಞಾನ ಕೇಂದ್ರದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ವಿವಿಧ ಬಗೆಯ ತಂತ್ರಜ್ಞಾನಗಳನ್ನು ಪ್ರಾಯೋಗಿಕವಾಗಿ ತಿಳಿಯಪಡಿಸಲೆಂದೇ ವಸ್ತುಸಂಗ್ರಹಾಲಯವನ್ನು ನಿರ್ಮಿಸಿದ್ದಾರೆ. ಸೌರಶಕ್ತಿಯನ್ನು ಬಳಸಿಕೊಂಡು ಅಡುಗೆ ಮಾಡುವ ಒಲೆ, ಅಡುಗೆ ಮನೆ ತ್ಯಾಜ್ಯದಿಂದ ಅನಿಲ ತಯಾರಿಸುವ ಘಟಕ– ಹೀಗೆ ವಿವಿಧ ಬಗೆಯ ತಂತ್ರಜ್ಞಾನಗಳ ಪ್ರದರ್ಶನ ಇಲ್ಲಿದೆ.‌

ಪ್ರದರ್ಶನದಿಂದ ಆರಂಭಗೊಂಡ ಇವರ ಪರಿಸರ ಅರಿವಿನ ಕಾರ್ಯ, ಬಳಿಕ ಪ್ರಾಯೋಗಿಕ ಅಳವಡಿಕೆಯತ್ತ ಹೊರಳಿಕೊಂಡಿತು. ಆಡಳಿತ ತರಬೇತಿ ಸಂಸ್ಥೆ, ಚಾಮರಾಜೇಂದ್ರ ಮೃಗಾಲಯ, ಅಂಚೆ ತರಬೇತಿ ಸಂಸ್ಥೆ, ಚಾಮುಂಡಿ ಬೆಟ್ಟದ ದಾಸೋಹ ಭವನ, ಎನ್‌ಐಇ ಕ್ಯಾಂಟೀನ್, ವಿವಿಧ ಶಿಕ್ಷಣ ಸಂಸ್ಥೆಗಳು ಸೇರಿದಂತೆ, 100 ಮನೆಗಳಿಗೆ ಅಡುಗೆ ತ್ಯಾಜ್ಯ ಜೈವಿಕ ಅನಿಲ ಸ್ಥಾವರ ಅಳವಡಿಸಿ ಪರಿಸರ ಪ್ರೇಮ ಮೆರೆದಿದ್ದಾರೆ.

‘ಸಮರ್ಥ ಇಂಧನ ವ್ಯರ್ಥವಾಗಬಾರದು. ಬದಲಿಗೆ ಅದು ಪುನರ್ಬಳಕೆ ಆಗಬೇಕು. ಆಗ ಮಾತ್ರ ಪರಿಸರವನ್ನು ಉಳಿಸಲು ಸಾಧ್ಯವಾಗುವುದು’ ಎನ್ನುವುದು ಪ್ರೊ.ಶ್ಯಾಮಸುಂದರ್‌ ಅವರ ಮನದಾಳದ
ಆಶಯ.

ಜತೆಗೆ, ಇವರು ಬಯೊ ಡೀಸೆಲ್‌ ಉತ್ಪಾದನೆ ಬಗ್ಗೆಯೂ ಶ್ರಮಿಸಿದ್ದಾರೆ. ಈಚೆಗಷ್ಟೇ ನಗರದ ನಳಪಾಕ್ ಹೋಟೆಲಿನಲ್ಲಿ ಘಟಕ ಸ್ಥಾಪಿಸಿದ್ದು, ದಿನಕ್ಕೆ 200 ಲೀಟರ್‌ ಬಳಸಿದ ಅಡುಗೆ ಎಣ್ಣೆಯಿಂದ ಇಂಧನ ತಯಾರಿಸಲಾಗುತ್ತಿದೆ.

ಅಂತೆಯೇ, ಕಡಿಮೆ ವೆಚ್ಚದಲ್ಲಿ ನಿರ್ಮಿಸಬಲ್ಲ ಪರಿಸರ ಪ್ರಿಯ ಮನೆಗಳ ನಿರ್ಮಾಣದ ಬಗ್ಗೆಯೂ ಇವರು ಸಾಕಷ್ಟು ಶ್ರಮಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !