ಜೂಜಾಟ ನಿಷೇಧಿಸಿದ ಪೊಲೀಸರು

ಬುಧವಾರ, ಏಪ್ರಿಲ್ 24, 2019
29 °C

ಜೂಜಾಟ ನಿಷೇಧಿಸಿದ ಪೊಲೀಸರು

Published:
Updated:

ಮೈಸೂರು: ಯುಗಾದಿ ಹಬ್ಬದ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಜೂಜಾಟ ಆಡುವುದನ್ನು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ನಿಷೇಧಿಸಿದ್ದಾರೆ.

ಜೂಜಾಟ ಆಡುವವರು, ಸ್ತ್ರೀಯರನ್ನು ಚುಡಾಯಿಸುವವರು, ಮದ್ಯ ಸೇವಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಹಬ್ಬದ ಪ್ರಯುಕ್ತ ನಡೆಸುವ ಕಾರ್ಯಕ್ರಮಗಳಿಗೆ ಪೊಲೀಸರಿಂದ ಅನುಮತಿ ಪಡೆಯಬೇಕು, ಧಾರ್ಮಿಕವಾಗಿ ಇತರರಿಗೆ ನೋವುಂಟು ಮಾಡುವ ಘೋಷಣೆಗಳನ್ನು ಕೂಗಬಾರದು, ಮಹಿಳೆಯರು ಓಡಾಡುವಾಗ ತಮ್ಮ ಆಭರಣಗಳನ್ನು ಕುರಿತು ಹೆಚ್ಚಿನ ನಿಗಾ ವಹಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಸಂಶಯಾಸ್ಪದ ವ್ಯಕ್ತಿಗಳು, ವಸ್ತುಗಳು ದೊರಕಿದರೆ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಅಥವಾ ನಿಯಂತ್ರಣ ಸಂಖ್ಯೆ 100, 0821– 2418139, 2418339ಗೆ ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !