ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಿಕರಿಗೆ ವಿದ್ಯಾರ್ಥಿನಿಯರ ಕೊಡುಗೆ

ಗಿನ್ನಿಸ್ ದಾಖಲೆ ಸೇರಿದ್ದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಿಂದ ಮತ್ತೊಂದು ಸಾಧನೆ
Last Updated 14 ಡಿಸೆಂಬರ್ 2018, 17:43 IST
ಅಕ್ಷರ ಗಾತ್ರ

ತಿ.ನರಸೀಪುರ:ಗಿನ್ನಿಸ್ ದಾಖಲೆಗೆ ಸೇರ್ಪಡೆಯಾದ ಬೆನ್ನಲ್ಲೇ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಮತ್ತೊಂದು ಸಾಧನೆ ಮಾಡಿ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

ಮೈಸೂರಿನ ‘ಮದರ್ ಇಂಡಿಯಾ ಕ್ರೊಚೆಟ್ ಕ್ವೀನ್’ ಸಂಸ್ಥೆಯು 2017–18ನೇ ಸಾಲಿನಲ್ಲಿಚೆನ್ನೈನಲ್ಲಿ ನಡೆದಗಿನ್ನಿಸ್ ದಾಖಲೆ ಸ್ಪರ್ಧೆಯಲ್ಲಿ ಭಾಗವಹಿಸಿ ಉಣ್ಣೆಯಲ್ಲಿ ಚಿಟ್ಟೆ ಮಾದರಿಗಳನ್ನು ತಯಾರಿಸಿತ್ತು. ಸುಮಾರು 58 ಸಾವಿರಕ್ಕೂ ಹೆಚ್ಚು ಚಿಟ್ಟೆ ಮಾದರಿಗಳನ್ನು ನೀಡಿ ಹಿಂದಿನ ದಾಖಲೆಯನ್ನು ಮುರಿದು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿತ್ತು. ಈ ಸ್ಪರ್ಧೆಯಲ್ಲಿ ತಿ.ನರಸೀಪುರ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ 200 ವಿದ್ಯಾರ್ಥಿನಿಯರು 2,500ಕ್ಕೂ ಚಿಟ್ಟೆ ಮಾದರಿಗಳನ್ನು ತಯಾರಿಸಿ ದಾಖಲೆಯಲ್ಲಿ ಸಹಭಾಗಿತ್ವ ತೋರಿದ್ದರು.

ಶಾಲೆಯ ಕರಕುಶಲ ತರಬೇತಿ ಶಿಕ್ಷಕಿ ಅನಿತಾ ಜಯರಾಮನ್ ಅದರ ನೇತೃತ್ವ ವಹಿಸಿದ್ದರು. ಶಾಲೆಯ ಮುಖ್ಯಶಿಕ್ಷಕಿ ಹಾಗೂ ಸಹ ಶಿಕ್ಷಕರು ಸಹಕಾರ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮದರ್ ಇಂಡಿಯಾ ಕ್ರೊಚೆಟ್ ಕ್ವೀನ್ ಸಂಸ್ಥೆಯ ಪದಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಗಿನ್ನಿಸ್ ದಾಖಲೆಯ ಪ್ರಮಾಣಪತ್ರಗಳನ್ನು ವಿತರಿಸಿದ್ದರು.

ಇದಾದ ಬಳಿಕ, ಮದರ್ ಇಂಡಿಯಾ ಕ್ರೊಚೆಟ್ ಕ್ವೀನ್ಸ್ ಸಂಸ್ಥೆಯು ಭಾರತದ ಗಡಿ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಚಳಿ ಮತ್ತು ಗಾಳಿಯಿಂದ ರಕ್ಷಿಸಿಕೊಳ್ಳಲು ಕ್ಯಾಪ್ ಹಾಗೂ ಕೌಲ್ (ಟೋಪಿ ಮತ್ತು ಮುಸುಕು) ಗಳನ್ನು ತಯಾರಿಸುವ ಯೋಜನೆ ಕೈಗೊಂಡು ಸೈನಿಕರ ಕ್ಯಾಂಪ್‌ಗಳಿಗೆ ತೆರಳಿ ವಿತರಿಸಿ ಬಂದಿದ್ದಾರೆ. ಟೋಪಿ ಮತ್ತು ಮುಸುಕು ತಯಾರಿಸುವ ಈ ಕಾರ್ಯದಲ್ಲಿ ಶಾಲೆಯ 75 ವಿದ್ಯಾರ್ಥಿನಿಯರು ಭಾಗವಹಿಸಿರು ವುದು ವಿಶೇಷ. ಇವರು 50 ಜತೆ ಟೋಪಿ, ಮುಸುಕು ತಯಾರಿಸಿಕೊಟ್ಟಿದ್ದಾರೆ.

‘ಮದರ್ ಇಂಡಿಯಾ ಕ್ರೊಚೆಟ್ ಕ್ವೀನ್ ಸಂಸ್ಥೆಯ ಸಹಯೋಗದೊಡನೆ ನಮ್ಮ ಶಾಲೆ ವಿದ್ಯಾರ್ಥಿನಿಯರು ಕಳೆದ ಸಾಲಿನಲ್ಲಿ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದ್ದಾರೆ’ ಎಂದು ಶಾಲೆಯ ಕರಕುಶಲ ತರಬೇತಿ ಶಿಕ್ಷಕಿ ಅನಿತಾ ಜಯರಾಮನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮಗೆ ಈ ಅವಕಾಶ ಲಭಿಸಲು ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ ಹಾಗೂ ಸಿಬ್ಬಂದಿ, ಸಂಸ್ಥೆಯ ಶುಭಶ್ರೀ ನಟರಾಜ್, ಕರ್ನಾಟಕದ ಪ್ರತಿನಿಧಿ ಸ್ಮಿತಾ ಪ್ರತಾಪ್ ಕಾರಣಕರ್ತರು’ ಎಂದು ಅನಿತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT