ಅನಾಥ ಬಾಲಕಿಯ ಮಾರಾಟ

ಮಂಗಳವಾರ, ಏಪ್ರಿಲ್ 23, 2019
32 °C
ಬೇರೊಬ್ಬರಿಗೆ ಹಣಕ್ಕಾಗಿ ಮಾರಿದ ಪತಿ

ಅನಾಥ ಬಾಲಕಿಯ ಮಾರಾಟ

Published:
Updated:

ಮೈಸೂರು: ಜಿಲ್ಲೆಯ ತಾಲ್ಲೂಕು ಒಂದರ 16 ವರ್ಷದ ಅನಾಥ ಬಾಲಕಿಯೊಬ್ಬಳನ್ನು ವಿವಾಹವಾದ ವ್ಯಕ್ತಿಯೊಬ್ಬ ಆಕೆಯನ್ನು ಹಣಕ್ಕಾಗಿ ಹೊರರಾಜ್ಯಕ್ಕೆ ಮಾರಾಟ ಮಾಡಿದ್ದಾನೆ. ತಪ್ಪಿಸಿಕೊಂಡು ಬಂದ ಬಾಲಕಿಯ ಕಥೆ ಕೇಳಿದ ಮತ್ತೊಬ್ಬ ಯುವಕ ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾನೆ. ಸದ್ಯ, ಬಾಲಕಿಯು ಸುರಕ್ಷಿತ ಕೇಂದ್ರವೊಂದರಲ್ಲಿ ಇದ್ದಾಳೆ.

ಏನಿದು ಘಟನೆ?

ತಂದೆ ಬಿಟ್ಟು ಹೋದ, ತಾಯಿ ತೀರಿಕೊಂಡ ಅನಾಥ ಬಾಲಕಿಗೆ ಆಶ್ರಯ ನೀಡಬೇಕಾದ ಸೋದರಿಯೂ ಆಶ್ರಯ ನೀಡಲಿಲ್ಲ. ಅದೇ ಗ್ರಾಮದ ಯುವಕನೊಬ್ಬನಿಗೆ ಈಕೆಯನ್ನು ಗ್ರಾಮಸ್ಥರೇ ವಿವಾಹ ಮಾಡಿಕೊಟ್ಟರು. ಆದರೆ, ಮದುವೆಯ ನಂತರ ಆತನಿಗೆ ಈಗಾಗಲೇ 2 ಮದುವೆಗಳಾಗಿರುವುದು ಗೊತ್ತಾಯಿತು. ಸ್ವಲ್ಪ ಸಮಯದಲ್ಲೆ ವಿಚ್ಛೇದನಕ್ಕೆ ಸಹಿ ಹಾಕಿಸಿಕೊಂಡ ಆತ ಹೊರ ರಾಜ್ಯವೊಂದರ ವ್ಯಕ್ತಿಗೆ ₹ 1.20 ಲಕ್ಷಕ್ಕೆ ಬಾಲಕಿ ಪತ್ನಿಯನ್ನೇ ಮಾರಾಟ ಮಾಡಿದ.

ಹೊರರಾಜ್ಯದ ವ್ಯಕ್ತಿಯಿಂದ ತಪ್ಪಿಸಿಕೊಂಡ ಬಾಲಕಿ ಮರಳಿ ಜಿಲ್ಲೆಗೆ ಬಂದಿದ್ದಾಳೆ. ಇಲ್ಲೂ ಈಕೆಯ ಕಥೆ ಕೇಳಿದ ವ್ಯಕ್ತಿಯೊಬ್ಬ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಈಕೆಯ ವೃತ್ತಾಂತ ಕೇಳಿದ ಈಕೆಯ ತಾಯಿಯ ಸ್ನೇಹಿತರೊಬ್ಬರು ವಿಷಯವನ್ನು ಮಕ್ಕಳ ರಕ್ಷಣಾ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸದ್ಯ, ಬಾಲಕಿಯನ್ನು ಸುರಕ್ಷಿತ ಕೇಂದ್ರವೊಂದರಲ್ಲಿ ಇರಿಸಲಾಗಿದೆ. ಅಧಿಕಾರಿಗಳು ಬಾಲಕಿಗೆ ಅನ್ಯಾಯ ಮಾಡಿದ ಒಟ್ಟು 15 ಮಂದಿಯ ವಿರುದ್ಧ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !