ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ ಪರೀಕ್ಷೆ: ಚಿನ್ನದ ಪದಕ

Last Updated 14 ಜುಲೈ 2020, 17:05 IST
ಅಕ್ಷರ ಗಾತ್ರ

ಮೈಸೂರು: ನಗರದ ಎಂ.ಎಂ.ಕೆ ಮತ್ತು ಎಸ್.ಡಿ.ಎಂ ಮಹಿಳಾ ಮಹಾ ವಿದ್ಯಾಲಯಯದ ವಿದ್ಯಾರ್ಥಿಗಳು ಮೈಸೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಮತ್ತು ನಗದು ಪುರಸ್ಕಾರ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಮೃದುಲಾ ಘೋರೆ ಬಿ.ಎಸ್‌ಸಿ ಪದವಿ ವಿಭಾಗದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಚಿನ್ನದ ಪದಕ, ಎಚ್.ರಾಮಾನುಜ ಅಯ್ಯಂಗಾರ್ ಚಿನ್ನದ ಪದಕ ಹಾಗೂ ದಿ.ಲೇಡಿ ಮಿಜ್ರಾಪ್ರೈಜ್ ನಗದು ಬಹುಮಾನ ಮತ್ತು ಪ್ರೊ.ಜೆ.ಶಶಿಧರಪ್ರಸಾದ್ ಅಭಿನಂದನಾ ಸಮಿತಿ ನಗದು ಬಹುಮಾನ (ತಲಾ 2 ಚಿನ್ನದ ಪದಕ, ನಗದು ಪರಸ್ಕಾರ) ಪಡೆದಿದ್ದಾರೆ.

ಕೆ.ಬಿ.ರಶ್ಮಿ ಸಂಸ್ಕೃತ ಭಾಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ್ದು, ದಿ.ಪಂಡಿತ್ ನವೀನಂ ರಾಮಾನುಜಾಚಾರ್ಯ ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ. ಈ ಇಬ್ಬರೂ ಪ್ರತಿಭಾನ್ವಿತರು ಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವದಲ್ಲಿ ಈ ಪುರಸ್ಕಾರ ಸ್ವೀಕರಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ಸಾಯಿನಾಥ್ ಮಲ್ಲಿಗೆಮಾಡು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT