ಮೈಸೂರು: ಸಿಕ್ಕಿದ್ದು ಗ್ರೆನೇಡ್‌ ಅಲ್ಲ, ಆಟಿಕೆ ವಸ್ತು; ಆತಂಕವಿಲ್ಲ– ಪೊಲೀಸ್

ಮಂಗಳವಾರ, ಏಪ್ರಿಲ್ 23, 2019
29 °C

ಮೈಸೂರು: ಸಿಕ್ಕಿದ್ದು ಗ್ರೆನೇಡ್‌ ಅಲ್ಲ, ಆಟಿಕೆ ವಸ್ತು; ಆತಂಕವಿಲ್ಲ– ಪೊಲೀಸ್

Published:
Updated:

ಮೈಸೂರು: ಇಲ್ಲಿನ ಹಿನಕಲ್ ಫ್ಲೈಓವರ್ ನಲ್ಲಿ ಶಕ್ತಿಶಾಲಿಯಾದ ಗ್ರೆನೇಡ್ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಗ್ರೆನೇಡ್ ನ್ನು ನಿಷ್ಕ್ರಿಯಗೊಳಿಸಿದ್ದಾರೆ. ಕೆಲಕಾಲ ಆತಂಕದ ವಾತಾವರಣ ಮೂಡಿತ್ತು. 

ತಾತ್ಕಾಲಿಕವಾಗಿ ಕೆಲನಿಮಿಷಗಳಷ್ಟು ಕಾಲ ವಾಹನ ಸಂಚಾರವನ್ನು ತಡೆಯಲಾಗಿತ್ತು. ಗ್ರೆನೇಡ್ ಇಲ್ಲಿಗೆ ಹೇಗೆ ಬಂದಿತು ಎಂಬುದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸಿಕ್ಕಿದ್ದು ಗ್ರೆನೇಡ್‌ ಅಲ್ಲ, ಆಟಿಕೆ ವಸ್ತು – ಪೊಲೀಸ್

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸರು ಇದೊಂದು ಆಟಿಕೆಯಾಗಿದ್ದು, ನೋಡುವುದಕ್ಕೆ ನಿಜವಾದ ಗ್ರೆನೇಡ್ ತರಹವೇ ಇತ್ತು. ಸದ್ಯ ಯಾವುದೇ ಆತಂಕ ಇಲ್ಲ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 5

  Angry

Comments:

0 comments

Write the first review for this !