ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಆರ್‌ಎಸ್‌ನಲ್ಲಿ ‘ಸ್ನೋ ಪಾರ್ಕ್‌’

ದೇಶದಲ್ಲೇ ಅತ್ಯಂತ ವಿಸ್ತಾರವಾದ ಪಾರ್ಕ್
Last Updated 12 ಮೇ 2019, 20:03 IST
ಅಕ್ಷರ ಗಾತ್ರ

ಮೈಸೂರು: ಮೈಸೂರಿನ ಮನರಂಜನೆಯ ತಾಣ ಎನಿಸಿರುವ ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್‌ನಲ್ಲಿ ಸ್ನೋ ಪಾರ್ಕ್‌ ಆರಂಭವಾಗಿದ್ದು, ಅರಮನೆ ನಗರಿಗೆ ಮತ್ತೊಂದು ಮೆರುಗು ತಂದಿದೆ.

ಮೈಸೂರಿನ ರಿಂಗ್ ರಸ್ತೆಯ ಮೇಟಗಳ್ಳಿಯಲ್ಲಿರುವ ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್‌ನ ಆವರಣದಲ್ಲೇ ಸ್ನೋ ಪಾರ್ಕ್ ತಲೆಯೆತ್ತಿದೆ.

ಸುಮಾರು 40 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಇದರಲ್ಲಿ ರೆಸ್ಟೋರೆಂಟ್ ಹಾಗೂ ಪಾರ್ಕಿಂಗ್ ಸ್ಥಳಾವಕಾಶವಿದೆ. 12 ಸಾವಿರ ಚದರ ಅಡಿಯಷ್ಟು ಹಿಮ ಪ್ರದೇಶ ಹೊಂದಿದ್ದು, ದೇಶದಲ್ಲೇ ಅತ್ಯಂತ ವಿಸ್ತಾರವಾದ ಸ್ನೋ ಪಾರ್ಕ್ ಆಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಸ್ನೋಪಾರ್ಕ್‌ನ ಉಷ್ಣಾಂಶ ಮೈನಸ್‌ 8 ಡಿಗ್ರಿಯಿಂದ ಮೈನಸ್‌ 10 ಡಿಗ್ರಿ ಸೆಲ್ಸಿಯಸ್‌ನಷ್ಟು ಇರಲಿದೆ. ಇಷ್ಟು ಕನಿಷ್ಠ ಉಷ್ಣಾಂಶ ಹೊಂದಿರುವ ದೇಶದ ಮೊದಲ ಸ್ನೋ ಪಾರ್ಕ್‌ ಎನಿಸಿಕೊಂಡಿದೆ.

ಇದು ದುಬೈನಲ್ಲಿರುವ ಸ್ನೋ ಪಾರ್ಕ್‌ನ ವಿನ್ಯಾಸವನ್ನು ಹೊಂದಿದೆ. ಪಾರ್ಕ್‌ ಒಳಗೆ ಪ್ರವೇಶಿಸಿದಾಗ ಹಿಮಾವೃತ ಕಣಿವೆ ಮತ್ತು ಪರ್ವತಗಳಲ್ಲಿ ಸುತ್ತಾಡಿದ ಅನುಭವ ಆಗುತ್ತದೆ. ಅತಿ ಉದ್ದದ ಒಳಾಂಗಣ ತೂಗು ಸೇತುವೆ ದಿ ಆಲ್ಫೈನ್ ಹ್ಯಾಂಗಿಂಗ್ ಬ್ರಿಡ್ಜ್‌ ಇಲ್ಲಿನ ಆಕರ್ಷಣೆಯಾಗಿದೆ.

ಇಲ್ಲಿ ರೆಸ್ಟೊರೆಂಟ್‌ ಇದ್ದು, ಚಳಿಯಲ್ಲಿ ಕಾಫಿ ಕುಡಿಯಬಹುದು. ಈ ರೆಸ್ಟೋರೆಂಟ್‌ನ ವಿಶೇಷ ಎಂದರೆ ಇಲ್ಲಿರುವ ಕುರ್ಚಿ ಮತ್ತು ಮೇಜುಗಳನ್ನು ಹಿಮದಿಂದ ವಿನ್ಯಾಸ ಮಾಡಲಾಗಿದೆ. ಸೆಲ್ಫಿ ತೆಗೆದುಕೊಳ್ಳಲು ಅನೇಕ ಸ್ಥಳಗಳಿವೆ.

ಪ್ರತಿ ಪ್ರದರ್ಶನವು ಒಂದು ಗಂಟೆಯ ಅವಧಿಯಾಗಿದ್ದು, ಗ್ರಾಹಕರಿಗೆ ಜಾಕೆಟ್, ಶೂ ಮತ್ತು ಗ್ಲೌಸ್‌ಗಳನ್ನು ನೀಡಲಾಗುತ್ತದೆ. ಸ್ವಚ್ಛತೆ ಮತ್ತು ನೈರ್ಮಲ್ಯಕ್ಕಾಗಿ ಯಂತ್ರಗಳನ್ನು ಬಳಸಲಾಗುತ್ತದೆ.

ಮಾಹಿತಿಗೆ ಮೊ: 9448557029, 95900 80808 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT