ಸೋಮವಾರ, ಜನವರಿ 20, 2020
21 °C

ಜಿಟಿಡಿಗೆ ಮಂಜುನಾಥ್ ಕೃತಜ್ಞತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ನ ಎಚ್‌.ಪಿ.ಮಂಜುನಾಥ್‌ ಅವರು ಬುಧವಾರ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡರ ನಿವಾಸಕ್ಕೆ ತೆರಳಿ ಕೃತಜ್ಞತೆ ಸಲ್ಲಿಸಿದರು.

‘ಕಾಂಗ್ರೆಸ್‌ ಗೆಲುವಿನ ಬಗ್ಗೆ ಉಪಚುನಾವಣೆ ಘೋಷಣೆಗೆ ಮುನ್ನವೇ ಜಿ.ಟಿ.ದೇವೇಗೌಡರು ಭವಿಷ್ಯ ನುಡಿದಿದ್ದು ನೆರವಾಯಿತು. ಹೀಗಾಗಿ, ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ’ ಎಂದು ನೂತನ ಶಾಸಕ ಮಂಜುನಾಥ್ ಹೇಳಿದರು.

‘ಜಿ.ಟಿ.ದೇವೇಗೌಡರ ಪತ್ನಿ ಲಲಿತಾ, ಅವರ ಪುತ್ರ ಹರೀಶ್ ಗೌಡ ತಮ್ಮ ಚುನಾವಣೆ ಎಂಬಂತೆ ನನ್ನ ಬೆನ್ನಿಗೆ ನಿಂತು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು’ ಎಂದು ಶ್ಲಾಘಿಸಿದರು.

 

ಪ್ರತಿಕ್ರಿಯಿಸಿ (+)