ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಜಿ.ಟಿ.ದೇವೇಗೌಡರ ನಿವಾಸಕ್ಕೆ ನಳಿನ್ ಕುಮಾರ್ ಕಟೀಲ್ ಭೇಟಿ

Last Updated 19 ಮೇ 2022, 7:12 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರ ನಿವಾಸಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗುರುವಾರ ಬೆಳಿಗ್ಗೆ ಭೇಟಿ ನೀಡಿದರು.

ಜಿ.ಟಿ.ದೇವೇಗೌಡ ಅವರ ಮೊಮ್ಮಗಳ ನಿಧನಕ್ಕೆ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ ಸಿಂಹ, ಶಾಸಕರಾದ ನಿರಂಜನ್, ಮಹೇಶ್ ಇದ್ದರು.

ರಾಜಕಾರಣ ಮಾತನಾಡಿಲ್ಲ- ಜಿ.ಟಿ.ದೇವೇಗೌಡ

ಮೈಸೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗಾಗಲಿ ಅಥವಾ ಬೇರೆ ಯಾರಿಂದಿಗೂ ರಾಜಕಾರಣದ ಚರ್ಚೆ ನಡೆದಿಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ನನ್ನ ಮೊಮ್ಮಗಳು ಪುಣ್ಯವಂತೆ. ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ ಬಂದ ರೀತಿಯಲ್ಲಿ ಗಣ್ಯರು, ಜನರು ಅವಳ ಸಾವಿನ ದಿನ ಬಂದರು. ನನ್ನ ಮೊಮ್ಮಗಳು ಬಹಳ ಚೂಟಿಯಾಗಿದ್ದಳು. ಅವಳಿಗೆ ಕ್ಯಾನ್ಸರ್ ಬಂದಿತ್ತು. ಆದರೇ ಏಳು ತಿಂಗಳಲ್ಲಿ ಕ್ಯಾನ್ಸರ್ ಗೆದಿದ್ದಳು. ವೈದ್ಯರು ಕೂಡ ಕ್ಯಾನ್ಸರ್ ಮುಕ್ತ ಎಂದು ಹೇಳಿ ಸಂತೋಷಪಟ್ಟಿದ್ದರು. ಆದರೆ ಅವಳಿಗೆ ದಿಢೀರನೇ ಆ ಲಕ್ಷಣಗಳು ಮತ್ತೆ ಕಾಣಿಸಿಕೊಂಡು ಸಾವು ಬಂತು. ಗೌರಿ ಸಾವಿನ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಮುಖಂಡರು ಸಾಂತ್ವನ ಹೇಳಿದ್ದಾರೆ. ಯಾವ ಪಕ್ಷದವರ ಜತೆಗೂ ರಾಜಕಾರಣ ಮಾತನಾಡಿಲ್ಲ. ಎಚ್.ಡಿ.ಕುಮಾರಸ್ವಾಮಿ‌ ಅವರ ಜತೆ ಮಾತು ಬಿಟ್ಟು ಎರಡೂವರೆ ವರ್ಷವಾಗಿತ್ತು. ಅವರು ಕೂಡ ಬಂದು ಸಾಂತ್ವನ ಹೇಳಿದ್ದಾರೆ. ನಿಖಿಲ್ ಕುಮಾರಸ್ಚಾಮಿ ನಮ್ಮ ಕುಟುಂಬದ ಸದಸ್ಯ ಇದ್ದಂತೆ. ನನ್ನ ಮಗ ಮತ್ತು ನಿಖಿಲ್ ಆತ್ಮೀಯ ಸ್ನೇಹಿತರು. ಹೀಗಾಗಿ, ನಮ್ಮ ನೋವಿನ ಜತೆಗೆ ಅವರಿದ್ದಾರೆ. ರಾಜಕಾರಣ ಕುರಿತು ಮುಂದೆ ಮಾತನಾಡುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT