ಅರ್ಬನ್ ಹಾತ್‌ನಲ್ಲಿ ಗುಜರಾತ್‌ ಕರಕುಶಲ ಉತ್ಸವ

7

ಅರ್ಬನ್ ಹಾತ್‌ನಲ್ಲಿ ಗುಜರಾತ್‌ ಕರಕುಶಲ ಉತ್ಸವ

Published:
Updated:
ಅರ್ಬನ್‌ ಹಾತ್‌ನಲ್ಲಿ ಕಂಗೊಳಿಸುತ್ತಿರುವ ಗುಜರಾತಿನ ಕರಕುಶಲ ಮೇಳ

ಹಬ್ಬಗಳ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಆಲಂಕಾರಿಕ ಸಾಮಗ್ರಿಗಳು, ಬಗೆಬಗೆಯ ಧಿರಿಸುಗಳು, ಗೃಹಬಳಕೆಯ ವಸ್ತುಗಳು, ಗುಜರಾತಿನ ಕುಶಲಕರ್ಮಿಗಳು ತಯಾರಿಸಿದ ವಸ್ತುಗಳು...

ಹೆಬ್ಬಾಳು ಕೈಗಾರಿಕಾ ಪ್ರದೇಶದ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಜುಲೈ 6ರಿಂದ ಆರಂಭಗೊಂಡಿರುವ ಗುಜರಾತ್‌ ಕರಕುಶಲ ಉತ್ಸವದಲ್ಲಿ ಈ ಮೇಲಿನ ವಸ್ತುಗಳು ಲಭ್ಯವಿವೆ.ಜೊತೆಗೆ ಗುಜರಾತಿನ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮವು ಮತ್ತಷ್ಟು ಮೆರುಗು ನೀಡಲಿದೆ.

ಗುಜರಾತಿನ ಪಟೋಲ ಸೀರೆ, ಬಾಂಧಿನಿ, ಬ್ಲಾಕ್ ಪ್ರಿಂಟ್, ಕಛ್‌ನ ಕಸೂತಿ, ಎಂಬ್ರಾಯ್ಡರಿ, ಮಿರರ್ ವರ್ಕ್, ಆಭರಣಗಳು, ಕೈಮಗ್ಗದ ಉತ್ಪನ್ನಗಳು, ಬೀಡ್ ವರ್ಕ್, ಮಡಕೆಗಳು, ಚೋಲಿ, ಚರ್ಮದ ಉತ್ಪನ್ನಗಳು, ಬೆಡ್‌ಷೀಟ್‌ಗಳು, ಕುಷನ್ ಕವರ್‌ಗಳು ಸೇರಿದಂತೆ ಕಸೂತಿ ಮತ್ತು ಕರಕುಶಲ ವಸ್ತುಗಳ ಬೃಹತ್ ಸಂಗ್ರಹವೇ ಮೈದಳೆದಿದೆ.

ಉತ್ಸವದ ಪ್ರಮುಖ ಆಕರ್ಷಣೆಗಳು: ಫ್ಯಾಷನ್ ಲೋಕದಲ್ಲಿ ಹಳೆಯ ಕಾಲದ ಆಭರಣಗಳಿಗೆ ಹೆಚ್ಚು ಬೇಡಿಕೆ ಇದ್ದು ಬಂಜಾರ ಶೈಲಿಯ ಆಭರಗಳು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಅವುಗಳಲ್ಲಿ ಬೀಡ್ ವರ್ಕ್ ಆಭರಣಗಳು, ಬ್ರಾಸ್ಲೆಟ್‌ಗಳು, ನೆಕ್ಲೆಸ್‌ಗಳು ಇವೆ. ಲಂಬಾಣಿ ಆಭರಣಗಳು ಗಮನ ಸೆಳೆಯುತ್ತವೆ.

ಜುಲೈ 11ರಂದು ಸಂಜೆ 6.30ಕ್ಕೆ ಗುಜರಾತಿನ ಜನಪ್ರಿಯ ಗರ್ಭಾ ನೃತ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !