ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಕ್ಷಮೆ ಕೋರಲು ಆಗ್ರಹ

ಎಚ್.ವಿಶ್ವನಾಥ್ ವಿರುದ್ಧ ಗುಡುಗಿದ ಎಚ್‌.ಪಿ.ಮಂಜುನಾಥ್
Last Updated 3 ಜನವರಿ 2020, 10:35 IST
ಅಕ್ಷರ ಗಾತ್ರ

ಹುಣಸೂರು: ಅಡಗೂರು ಎಚ್.ವಿಶ್ವನಾಥ್ ಶಾಸಕರಾಗಿದ್ದ 14 ತಿಂಗಳಲ್ಲಿ ₹298 ಕೋಟಿ ಅನುದಾನ ತಂದಿರುವುದಾಗಿ ಸುಳ್ಳು ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ ಎಂದು ಶಾಸಕ ಎಚ್‌.ಪಿ.ಮಂಜುನಾಥ್ ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಶ್ವನಾಥ್‌ ಅವರ ರಾಜಕೀಯ ಕೆಸರೆರಚಾಟವನ್ನು ದಶಕಗಳಿಂದ ನೋಡುತ್ತಿದ್ದೇನೆ. 14 ತಿಂಗಳಲ್ಲಿ ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಗ್ರಾಮಗಳಿಗೆ ಭೇಟಿ ನೀಡಿಲ್ಲ. ಹೀಗಿರುವಾಗ ಗ್ರಾಮೀಣ ಜನರ ಬವಣೆ ಬಗ್ಗೆ ಏನು ಗೊತ್ತಿದೆ’ ಎಂದು ಪ್ರಶ್ನಿಸಿದರು.

ಹುಣಸೂರು ಸಾರ್ವಜನಿಕ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ಮಂಜೂರಾತಿ ನೀಡಿ, ಮೊದಲ ಕಂತಿನಲ್ಲಿ ₹25 ಕೋಟಿ ಅನುದಾನ ನೀಡಿದ್ದರು. ಇದಕ್ಕಾಗಿ ತೋಟಗಾರಿಕೆ ಇಲಾಖೆಗೆ ಸೇರಿದ 4 ಎಕರೆ ನಿವೇಶನ ಮಂಜೂರಾಗಿತ್ತು. ಇದರ ಬದಲಿಯಾಗಿ ಧರ್ಮಾಪುರ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಗೆ 100 ಎಕರೆ ಭೂಮಿ ನೀಡಲಾಗಿತ್ತು ಎಂದರು.

ವಿಶ್ವನಾಥ್‌ ಶಾಸಕರಾಗಿದ್ದ ಅವಧಿ ಯಲ್ಲಿ ಕ್ಷೇತ್ರದ ಜನರಿಗೆ ಮಾಡಿರುವ ಅನ್ಯಾಯ ಮತ್ತು ಅಕ್ರಮ ಗಳಿಗೆ ಬೇಷರತ್ ಕ್ಷಮೆ ಕೋರಬೇಕು. ವಿಶ್ವನಾಥ್ ಗಾಜಿನ ಮನೆಯಲ್ಲಿ ಕುಳಿತು ಎದುರು ಮನೆಗೆ ಕಲ್ಲು ಎಸೆಯುತ್ತಿದ್ದಾರೆ. 14 ತಿಂಗಳಲ್ಲಿ ಅವರು ಮಾಡಿರುವ ಕೆಲ ತಪ್ಪುಗಳಿಗೆ ದಾಖಲೆಗಳಿದ್ದು, ಅವುಗಳನ್ನು ಸಾರ್ವಜನಿಕರಿಗೆ ಬಹಿರಂಗ ಪಡಿಸಬೇಕಾಗುತ್ತದೆ ಎಂದು ಗುಡುಗಿದರು.

ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಶಿವಯ್ಯ, ಮುಖಂಡರಾದ ಪುಟ್ಟರಾಜು, ಅಸ್ವಾಳು ಕೆಂಪೇಗೌಡ, ಬಸವರಾಜೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT