ಗುರುವಾರ , ನವೆಂಬರ್ 21, 2019
21 °C

ಮೈಸೂರು ನಗರದಲ್ಲಿ ಧಾರಾಕಾರ ಮಳೆ

Published:
Updated:

ಮೈಸೂರು: ನಗರದಲ್ಲಿ ಶುಕ್ರವಾರ ಸಂಜೆ ಜಿಟಿಜಿಟಿ ಮಳೆ ಸುರಿಯಿತು. ಸಂಜೆ ಆರಂಭವಾದ ಮಳೆಯು ತಡರಾತ್ರಿ ಧಾರಾಕಾರವಾಗಿ ಸುರಿಯುತ್ತಲೇ ಇತ್ತು.

ಗುಡುಗು ಮಿಂಚಿನಿಂದ ಕೂಡಿದ ಮಳೆಯಿಂದ ರಸ್ತೆಗಳಲ್ಲಿ ನೀರು ಹರಿದಾಡಿತು. ಕಾರ್ತೀಕ ಮಾಸದಲ್ಲಿ ಸಾಮಾನ್ಯವಾಗಿ ಮಳೆ ಬರುವುದಿಲ್ಲ. ನವೆಂಬರ್ ತಿಂಗಳಿನಲ್ಲಿ ಚಳಿಗಾಲ ಆರಂಭವಾಗಬೇಕು. ಆದರೆ, ಮುಂಗಾರಿನಂತೆ ಮಳೆ ಸುರಿಯಿತು.

ಹಲವು ದೇಗುಲಗಳಲ್ಲಿ ಶುಕ್ರವಾರದ ಸಂಜೆ ನಡೆಯು ತ್ತಿದ್ದ ದೀಪೋತ್ಸವಕ್ಕೆ ಮಳೆ ಅಡಚಣೆಯಾಯಿತು. ಜನತಾನ ಗರದಲ್ಲಿ ಮರ ಉರುಳಿದೆ. ಶಾರದಾದೇವಿನಗರ, ಟಿ.ಕೆ.ಲೇಔಟ್‌ ನಲ್ಲಿ ಮನೆಗಳಿಗೆ ನೀರುನುಗ್ಗಿದೆ.

ಪ್ರತಿಕ್ರಿಯಿಸಿ (+)