ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆ: ಮೈಸೂರಿನಲ್ಲಿ ಇನ್ನಷ್ಟು ಮರಗಳು ಧರೆಗೆ

Last Updated 17 ಮೇ 2022, 5:08 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಸೋಮವಾರ ರಾತ್ರಿಯಿಂದಲೂ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಇನ್ನಷ್ಟು ಮರಗಳು ಧರೆಗುರುಳಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತೆರವು ಕಾರ್ಯಾಚರಣೆಯೂ ವೇಗವಾಗಿ ನಡೆಯುತ್ತಿಲ್ಲ.

ಕುಕ್ಕರಹಳ್ಳಿ ಕೆರೆ ಸಮೀಪ ರಸ್ತೆಗುರುಳಿದ ಭಾರಿ ಗಾತ್ರದ ಮರದಿಂದ ಮೈಸೂರು-ಬೋಗಾದಿ ರಸ್ತೆಯಲ್ಲಿ ಸಂಚಾರ ಕಡಿತಗೊಂಡಿದೆ. ಮರ ತೆರವುಗೊಳಿಸುತ್ತಿದ್ದ ಪಾಲಿಕೆಯ ರಕ್ಷಣಾ ತಂಡ ಅಭಯ್ 3ನೇ ತಂಡದ ಯಂತ್ರೋಪಕರಣಗಳು ಮಳೆಯಿಂದ ಕೆಟ್ಟಿವೆ.
ವಿದ್ಯಾರಣ್ಯಪುರಂನಲ್ಲಿ ಬೃಹತ್ ಗಾತ್ರದ ಮರವೊಂದು ಕಾರಿನ ಮೇಲೆ ಉರುಳಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹಿಂಭಾಗದ ರಸ್ತೆಯಲ್ಲೂ ದೊಡ್ಡ ಗಾತ್ರದ ಮರ ಧರೆಗುರುಳಿದೆ.

ತ್ರಿವೇಣಿ ವೃತ್ತ ಸೇರಿದಂತೆ ಅನೇಕ ಕಡೆ ಮರಗಳು ಬಿದ್ದಿವೆ‌

ರಸ್ತೆಗೆ ಬಿದ್ದ ವಿದ್ಯುತ್ ಪರಿವರ್ತಕ
ಇಲ್ಲಿನ ಕುವೆಂಪು ನಗರದ ಆರ್ ಎಂ ಪಿ ಕ್ವಾರ್ಟಸ್ ಸಮೀಪದ ಕೆ ಎಚ್ ಬಿ ಕಾಲೊನಿಯಲ್ಲಿ ವಿದ್ಯುತ್ ಪರಿವರ್ತಕವೊಂದು ರಸ್ತೆಗೆ ಬಿದ್ದಿದೆ. ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಅಪಾಯ ಸಂಭವಿಸಿಲ್ಲ. ಇದನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT