ಮಂಗಳವಾರ, ಸೆಪ್ಟೆಂಬರ್ 17, 2019
25 °C

ಗಾಳಿ ಸಹಿತ ಮಳೆಗೆ ವಿವಿಧೆಡೆ ಹಾನಿ

Published:
Updated:
Prajavani

ಪಿರಿಯಾಪಟ್ಟಣ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು ಕೆಲವು ಗ್ರಾಮಗಳಲ್ಲಿ ಹಾನಿಯುಂಟಾಗಿದೆ.

ಸೋಮವಾರ ಸಂಜೆ 4 ಗಂಟೆಗೆ ಸಮಯದಲ್ಲಿ ಗಾಳಿ ಸಹಿತ ಮಳೆ ಬಿದ್ದು, ತಾಲ್ಲೂಕಿನ ಹುಣಸೇಕುಪ್ಪೆ, ಪಾರೆಕೊಪ್ಪಲು, ಚೌಕೂರು ಸೇರಿದಂತೆ ಹಲವೆಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ.

ಪಟ್ಟಣದ ಶಿವಪ್ಪ ಬಡಾವಣೆ, ಪರಿಸರ ನಗರ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಯಿತು. ಈ ವೇಳೆ ಪಟ್ಟಣದ ಡಿಪಿಬಿಎಸ್‍ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಳೆಯ ನೀರು ನಿಂತ ದೃಶ್ಯ
ಕಂಡು ಬಂದಿತು.

Post Comments (+)