ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿಕೆಗಿಂತ ಹೆಚ್ಚು ಮಳೆ; ಹೆಚ್ಚಿದ ಅಂತರ್ಜಲ ಮಟ್ಟ

ಹಿಂದಿನ ವರ್ಷಕ್ಕಿಂತಲೂ ಹೆಚ್ಚು ಸುರಿದ ವರ್ಷಧಾರೆ; ಬೆಳೆಗೆ ಹಾನಿ–ಬಹುತೇಕ ಕೆರೆಗಳಿಗೆ ನೀರು
Last Updated 8 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಮೈಸೂರು: ಪ್ರಸಕ್ತ ವರ್ಷದ ಮುಂಗಾರು–ಹಿಂಗಾರು ಹಂಗಾ ಮಿನಲ್ಲಿ ವಾಡಿಕೆಗಿಂತ ಹೆಚ್ಚು ವರ್ಷಧಾರೆ ಯಾಗಿದ್ದು, ಕೃಷಿ, ತೋಟಗಾರಿಕೆ, ದೀರ್ಘಕಾಲೀನ ಬೆಳೆಗಳು ಹಾನಿಗೀಡಾ ದರೆ; ಜಿಲ್ಲೆಯ ಜಲಾಶಯ, ಬಹುತೇಕ ಕೆರೆ–ಕಟ್ಟೆ, ನಾಲೆಗಳು ತುಂಬಿ
ಹರಿದಿವೆ.

ಹಿಂದಿನ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದ ಮಳೆ ಈ ಬಾರಿ ಸುರಿದಿದ್ದು, ತೆರೆದ ಬಾವಿಗಳು ಸೇರಿದಂತೆ ಕೊಳವೆಬಾವಿಗಳಲ್ಲಿನ ಅಂತರ್ಜಲದ ಮಟ್ಟ ಹೆಚ್ಚಿದೆ. ಇದು ರೈತ ಸಮೂಹದ ಸಂತಸವನ್ನು ನೂರ್ಮಡಿಗೊಳಿಸಿದೆ. ಇದರ ನಡುವೆಯೂ ಕೆಲವೆಡೆಯ ಕೆರೆಗಳು ಭಣಗುಡುತ್ತಿರುವುದು ಆಯಾ ಭಾಗದ ರೈತರನ್ನು ಚಿಂತೆಗೆ ದೂಡಿದೆ.

ಭತ್ತದ ಬೆಳೆಗಾರರಿಗೆ ವರ್ಷಧಾರೆ ವರವಾಗಿ ಪರಿಣಮಿಸಿದರೆ, ಅರೆ ನೀರಾವರಿ ಆಶ್ರಿತ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿತು. ಒಣ ಬೇಸಾಯದ ಕೃಷಿಕರು ಸುರಿದ ಮಳೆಗೆ ಕಂಗಾಲಾದರು. ವಾಣಿಜ್ಯ ಬೆಳೆ ತಂಬಾಕು, ಹತ್ತಿ ಬೆಳೆಗಾರರು ಚಿಂತಾಕ್ರಾಂತರಾಗುವಂತೆ ಮಾಡಿದೆ.

ಮಳೆಯ ಅಬ್ಬರ: ಜನವರಿಯಿಂದ ಅಕ್ಟೋಬರ್‌ ಅಂತ್ಯದವರೆಗೂ ಜಿಲ್ಲೆಯ ಸರಾಸರಿ ವಾಡಿಕೆ ಮಳೆ 75 ಸೆಂ.ಮೀ. ಆದರೆ ಪ್ರಸಕ್ತ ವರ್ಷ 93.8 ಸೆಂ.ಮೀ. ವರ್ಷಧಾರೆಯಾಗಿದೆ. ವಾಡಿಕೆಗಿಂತ 18.8 ಸೆಂ.ಮೀ. ಹೆಚ್ಚು ಮಳೆ ಸುರಿದಿದೆ. ಶೇ 25ರಷ್ಟು ಹೆಚ್ಚು ಮಳೆ ಸುರಿದಿದ್ದು, ಹಿಂದಿನ ವರ್ಷಕ್ಕಿಂತ ಕೊಂಚ ಹೆಚ್ಚೇ ಸುರಿದಿದೆ. 2018ರಲ್ಲಿ ಇದೇ ವೇಳೆಗೆ 91.65 ಸೆಂ.ಮೀ. ಮಳೆ ಸುರಿದಿತ್ತು ಎಂದು ಕೃಷಿ ಇಲಾಖೆಯ ಅಂಕಿ–ಅಂಶಗಳು ದೃಢಪಡಿಸಿವೆ.

ವರ್ಷದ ಆರಂಭ ಜನವರಿಯಿಂದ ಜುಲೈವರೆಗೂ ಏಳು ತಿಂಗಳು ಜಿಲ್ಲೆಯ ವ್ಯಾಪ್ತಿಯಲ್ಲಿ ವಾಡಿಕೆ ಮಳೆಯಲ್ಲೇ ಸಾಕಷ್ಟು ಕೊರತೆಯಿತ್ತು. ಏಪ್ರಿಲ್‌ನಲ್ಲಿ 6.19 ಸೆಂ.ಮೀ. ವಾಡಿಕೆ ಮಳೆಗೆ, 5.88 ಸೆಂ.ಮೀ. ಸುರಿದಿತ್ತು. ಮೇ ನಲ್ಲಿ 12.8 ಸೆಂ.ಮೀ. ವಾಡಿಕೆಗೆ 11.8 ಸೆಂ.ಮೀ.ಸುರಿದಿದೆ.

ಜೂನ್‌ನಲ್ಲಿ 8.91 ಸೆಂ.ಮೀ.ವಾಡಿಕೆಗೆ 5.90 ಸೆಂ.ಮೀ, ಜುಲೈನಲ್ಲಿ 12.4 ಸೆಂ.ಮೀ.ವಾಡಿಕೆಗೆ, 8.10 ಸೆಂ.ಮೀ ಮಳೆ ಸುರಿದಿದೆ. ಈ ತಿಂಗಳುಗಳಲ್ಲಿ ಕೃಷಿ ಚಟುವಟಿಕೆಯನ್ನು ಸಮರ್ಪಕವಾಗಿ ನಡೆಸಲು ಸಾಧ್ಯವಾ ಗದಷ್ಟು ಕೊರತೆಯ ಮಳೆ ಸುರಿದಿತ್ತು.

ಮಹಾ ಮಳೆ: ಆಗಸ್ಟ್‌ನಲ್ಲಿ ಮಹಾ ಮಳೆ ಸುರಿಯಿತು. 8 ಸೆಂ.ಮೀ. ವಾಡಿಕೆಗೆ 30.30 ಸೆಂ.ಮೀ. ವರ್ಷಧಾರೆಯಾಗಿದ್ದು, 22 ಸೆಂ.ಮೀ.ಗೂ ಹೆಚ್ಚುವರಿ ಮಳೆ ಸುರಿಯಿತು. ಶೇ 278ರಷ್ಟು ಮಳೆ ಹೆಚ್ಚಾಯಿತು. 2018ರಲ್ಲಿ ಇದೇ ತಿಂಗಳಲ್ಲಿ 13.3 ಸೆಂ.ಮೀ. ಮಳೆಯಾಗಿತ್ತು.

ಸೆಪ್ಟೆಂಬರ್‌ನಲ್ಲಿ 10.20 ಸೆಂ.ಮೀ.ವಾಡಿಕೆ ಮಳೆಗೆ 12 ಸೆಂ.ಮೀ. ಸುರಿದಿದೆ. ಅಕ್ಟೋಬರ್‌ನಲ್ಲಿ 14.58 ಸೆಂ.ಮೀ. ವಾಡಿಕೆ ಮಳೆಗೆ 18.7 ಸೆಂ.ಮೀ ಮಳೆಯಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿ ಗೌರಮ್ಮ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT