ಬುಧವಾರ, ನವೆಂಬರ್ 13, 2019
18 °C
ಕಡಿಮೆಯಾಗದ ಟೊಮೆಟೊ, ಈರುಳ್ಳಿ ಧಾರಣೆ

ಕೋಳಿ ಮೊಟ್ಟೆ ಧಾರಣೆ ಏರಿಕೆ

Published:
Updated:
Prajavani

ಮೈಸೂರು: ಕೋಳಿ ಮೊಟ್ಟೆ ಧಾರಣೆಯ ಏರುಗತಿ ಪ್ರಾರಂಭವಾಗಿದ್ದು, ಮೊಟ್ಟೆ ಉತ್ಪಾದಕರಲ್ಲಿ ನಿರೀಕ್ಷೆಗಳನ್ನು ಗರಿಗೆದರಿಸಿದೆ.

ಈ ವರ್ಷದಲ್ಲಿ ಉತ್ತಮ ದರ ಸಿಗದೇ ಉತ್ಪಾದಕರು ಅತೀವ ನಷ್ಟ ಅನುಭವಿಸಿದ್ದರು. ಕೋಳಿಯ ಆಹಾರದ ಬೆಲೆ ಹೆಚ್ಚಾಗಿರುವುದು ಇವರ ನಷ್ಟವನ್ನು ಇಮ್ಮಡಿಸಿತ್ತು. ಹೊಸ ಮುಸುಕಿನ ಜೋಳ ಬರುವವರೆಗೂ ಬೆಲೆ ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಈಗ ಒಂದು ಮೊಟ್ಟೆಗೆ ಸಗಟು ಬೆಲೆ ₹ 4.29ಕ್ಕೆ ಏರಿಕೆಯಾಗಿದ್ದರೂ ಉತ್ಪಾದಕರಿಗೆ ಲಾಭವಾಗುತ್ತಿಲ್ಲ.

ದೀಪಾವಳಿ ಹಬ್ಬ ಹಾಗೂ ಕಾರ್ತೀಕ ಮಾಸ ಬರುವುದರಿಂದ ಮೊಟ್ಟೆಗೆ ಬೇಡಿಕೆ ಕಡಿಮೆಯಾಗಿ, ಮತ್ತೆ ಬೆಲೆ ಇಳಿಕೆಯಾಗುವ ಎಲ್ಲ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಟೊಮೆಟೊ ದರ ಮತ್ತೆ ಏರಿಕೆಯಾಗಿದೆ. ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ ಟೊಮೆಟೊ ಬೆಲೆ ₹ 18 ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇದರ ದರ ₹ 28ರಿಂದ 30ರವರೆಗೂ ಇದೆ.

ಬೀನ್ಸ್ ಸಗಟು ಧಾರಣೆ ₹ 25 ಇದ್ದರೂ ಚಿಲ್ಲರೆ ಮಾರುಕಟ್ಟೆಯಲ್ಲಿ ದರವು ₹ 50ರ ಗಡಿ ದಾಟಿದೆ. ಹಸಿಮೆಣಸಿನಕಾಯಿಯ ಸಗಟು ದರ ₹ 20ರಿಂದ ₹ 27ಕ್ಕೆ ಹೆಚ್ಚಿದೆ. ಬೆಲೆ ಇಳಿಕೆಯಿಂದ ನಷ್ಟ ಅನುಭವಿಸುತ್ತಿದ್ದ ರೈತರನ್ನು ಬೆಲೆ ಹೆಚ್ಚಳವು ಕೈಹಿಡಿದಿದೆ.

ಈರುಳ್ಳಿ ಮತ್ತು ನುಗ್ಗೆಕಾಯಿಗಳ ಧಾರಣೆಯು ಇಳಿಕೆ ಕಂಡಿಲ್ಲ. ಈರುಳ್ಳಿ ಆವಕ ಈಚೆಗೆ ದಿನವೊಂದಕ್ಕೆ 700 ಕ್ವಿಂಟಲ್‌ಗೆ ಇಳಿದಿತ್ತು. ಆಗ ಇದರ ಸಗಟು ಧಾರಣೆ ₹ 38ಕ್ಕೆ ಏರಿಕೆ ಕಂಡಿತ್ತು. ಸೋಮವಾರ 2,304 ಕ್ವಿಂಟಲ್‌ನಷ್ಟು ಈರುಳ್ಳಿ ಎಪಿಎಂಸಿ ಮಾರುಕಟ್ಟೆಗೆ ಬಂದರೂ, ದರ ₹ 35 ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈಗಾಗಲೇ ಇದರ ದರ ₹ 50 ದಾಟಿದೆ.

ಪ್ರತಿಕ್ರಿಯಿಸಿ (+)