ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ 8ರಿಂದ ಇಂಡಿಯಾವುಡ್ ಪ್ರದರ್ಶನ

Last Updated 1 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮರದ ಪೀಠೋಪಕರಣ ತಯಾರಿಕಾ ಕ್ಷೇತ್ರದ ಏಷ್ಯಾದ ಅತಿ ದೊಡ್ಡ ಪ್ರದರ್ಶನವು ಬೆಂಗಳೂರಿನ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಇದೇ 8 ರಿಂದ 12ರವರೆಗೆ ನಡೆಯಲಿದೆ.

ಐದು ದಿನಗಳವರೆಗೆ ನಡೆಯಲಿರುವ ಈ ‘ಇಂಡಿಯಾ ವುಡ್ ಪ್ರದರ್ಶನ’ದಲ್ಲಿ ದೇಶ ವಿದೇಶಗಳ ಕಂಪನಿಗಳು ಪಾಲ್ಗೊಳ್ಳುತ್ತಿವೆ. ಒಟ್ಟು 850 ಕ್ಕೂ ಹೆಚ್ಚು ಪ್ರದರ್ಶಕರು ಭಾಗಿಯಾಗುತ್ತಿದ್ದಾರೆ.

‘ಹೊಸ ಹೊಸ ತಂತ್ರಜ್ಞಾನವನ್ನು ದೇಶಿ ಕಂಪನಿಗಳು ಅಳವಡಿಸಿಕೊಳ್ಳಲು ಈ ಪ್ರದರ್ಶನ ನೆರವಾಗಲಿದೆ. ವಿಶ್ವದ ಪೀಠೋಪಕರಣ ಉದ್ಯಮದಲ್ಲಿ ಭಾರತ 14 ನೇ ಅತಿದೊಡ್ಡ ದೇಶವಾಗಿದೆ. 2019 ರ ವೇಳೆಗೆ ಭಾರತದ ಈ ಉದ್ದಿಮೆ ವಾರ್ಷಿಕ ಶೇ 20 ರಷ್ಟು ಪ್ರಗತಿ ಸಾಧಿಸಲಿದೆ. ₹ 2 ಲಕ್ಷ ಕೋಟಿಗಳಷ್ಟು ವಹಿವಾಟು ನಡೆಸುವ ನಿರೀಕ್ಷೆ ಇದೆ.  ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ಶೇ 60 ರಷ್ಟು ಪೀಠೋಪಕರಣಗಳನ್ನು  ಆಮದು ಮಾಡಿಕೊಳ್ಳಲಾಗುತ್ತಿದೆ’ ಎಂದು ಎಂದು ಪಿಡಿಎ ಟ್ರೇಡ್ ಫೇರ್‌ನ ಉಪಾಧ್ಯಕ್ಷ ಶಿವಕುಮಾರ ವಿ. ತಿಳಿಸಿದ್ದಾರೆ.

‘ಈ ಪ್ರದರ್ಶನದಲ್ಲಿ ಭಾಗಿಯಾಗುವ ಪ್ರದರ್ಶಕರು ಮತ್ತು ದೇಶಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಆಧುನಿಕ ಪೀಠೋಪಕರಣಗಳ ಉದ್ಯಮದ ಬೆಳವಣಿಗೆಗೆ ಇದು ನೆರವಾಗಲಿದೆ. ಮೇಳಕ್ಕೆ 60 ಸಾವಿರ ಜನರು ಭೇಟಿ ನೀಡುವ ನಿರೀಕ್ಷೆ ಇದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT