ಹುಕ್ಕಾ ಬಾರ್‌ ಮೇಲೆ ದಾಳಿ

7

ಹುಕ್ಕಾ ಬಾರ್‌ ಮೇಲೆ ದಾಳಿ

Published:
Updated:
Deccan Herald

ಮೈಸೂರು: ಇಲ್ಲಿನ ಕಾಳಿದಾಸ ರಸ್ತೆಯಲ್ಲಿ ನಡೆಯುತ್ತಿದ್ದ ಹುಕ್ಕಾ ಬಾರ್‌ಗಳ ಮೇಲೆ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿಯ ತಂಡ  ದಾಳಿ ನಡೆಸಿ 5 ಅಂಗಡಿಗಳಿಗೆ ಬೀಗಮುದ್ರೆ ಹಾಕಿತು.

ಹೊರಗಡೆ ಮಾಂಸಾಹಾರಿ ಹೋಟೆಲ್‌ಗಳೆಂದು ಬೋರ್ಡ್‌ ಹಾಕಿ ಒಳಗಡೆ ಗುಪ್ತವಾಗಿ ಹುಕ್ಕಾ ಸೇವನೆ ನಡೆಯುತ್ತಿತ್ತು. ಒಂದು ಬಾರಿಗೆ 10 ಮಂದಿ ಕುಳಿತುಕೊಳ್ಳುವಷ್ಟು ದೊಡ್ಡ ಜಾಗದಲ್ಲಿ 10 ಜನರು ಏಕಕಾಲದಲ್ಲಿ ಹುಕ್ಕಾವನ್ನು ಸೇವಿಸುವ ಸೌಲಭ್ಯ ಇಲ್ಲಿತ್ತು.

ಕೆಲವು ಅಂಗಡಿಗಳಲ್ಲಿ ಹುಕ್ಕಾ ಸೇವನೆ ನಡೆಯುತ್ತಿದ್ದರೆ, ಮತ್ತೆ ಕೆಲವು ಅಂಗಡಿಗಳಲ್ಲಿ ಹುಕ್ಕಾ ಸೇವನೆಗೆ ಸಂಬಂಧಿಸಿದ ಯಂತ್ರೋಪಕರಣಗಳಿದ್ದವು. ಎಲ್ಲ 5 ಅಂಗಡಿಗಳಿಗೂ ಬೀಗಮುದ್ರೆ ಹಾಕಿದ ತಂಡವು, ಇನ್ನು ಮುಂದೆ ಇಂತಹ ವ್ಯವಹಾರ ನಡೆಸಿದರೆ ಪೊಲೀಸರ ಗಮನಕ್ಕೆ ತಂದು ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿತು.

ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಟಿ.ಚಲುವೇಗೌಡ, ಸದಸ್ಯ ಪುರುಷೋತ್ತಮ, ಪಾಲಿಕೆಯ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ, ಡಾ.ನಾಗರಾಜು, ಪರಿಸರ ಎಂಜಿನಿಯರುಗಳು ತಂಡದಲ್ಲಿ ಇದ್ದರು.

ಹುಕ್ಕಾ ಸೇವನೆ ಆರೋಗ್ಯಕ್ಕೆ ಮಾರಕ. ಅದೊಂದು ಮಾದಕದ್ರವ್ಯದ ಚಟವಿದ್ದಂತೆ. ವ್ಯಕ್ತಿಯ ಮನಸ್ಸನ್ನು ಸಂಪೂರ್ಣವಾಗಿ ಹಾಳು ಮಾಡುತ್ತದೆ. ಹುಕ್ಕಾ ಸೇವನೆ ಹಾಗೂ ಅದಕ್ಕೆ ಪ್ರೋತ್ಸಾಹಿಸುವುದು ತಂಬಾಕು ನಿಯಂತ್ರಣ ಕಾಯ್ದೆಯಡಿ ಅಪರಾಧ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !