ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26ರಂದು ಆಲಗೂಡಿನ ಸಿದ್ಧೇಶ್ವರಸ್ವಾಮಿ ದೇಗುಲದಲ್ಲಿ ವಿಗ್ರಹ ಪ್ರತಿಷ್ಠಾಪನೆ

Last Updated 23 ನವೆಂಬರ್ 2020, 11:32 IST
ಅಕ್ಷರ ಗಾತ್ರ

ಮೈಸೂರು: ತಿ.ನರಸೀಪುರ ತಾಲ್ಲೂಕಿನ ಆಲಗೂಡಿನಲ್ಲಿರುವ ಸಿದ್ಧೇಶ್ವರಸ್ವಾಮಿ ದೇಗುಲದ ಪುನರುಜ್ಜೀವನದ ನಂತರ ವಿಗ್ರಹ ಪ್ರತಿಷ್ಠಾಪನಾ ಕಾರ್ಯವು ನ. 26ರಿಂದ 2 ದಿನಗಳ ಕಾಲ ನಡೆಯಲಿದೆ.

ಕ್ರಿ.ಶ 1,275ಕ್ಕೂ ಹೆಚ್ಚು ಪ್ರಾಚೀನತೆ ಹೊಂದಿದ ಹೆಗ್ಗಳಿಕೆ ಈ ದೇಗುಲದ್ದು. ಗಂಗರ ಅರಸ ಶ್ರೀಪುರುಷನ ಕುರಿತ ವಿವರಗಳಿರುವ ಶಾಸನಗಳೂ ಸೇರಿದಂತೆ ಒಟ್ಟು 15 ಪ್ರಾಚೀನ ಶಾಸನಗಳು ಈ ಗ್ರಾಮದಲ್ಲಿ ಲಭ್ಯವಾಗಿವೆ ಎಂದು ಆಲಗೂಡು ಶ್ರೀ ಸಿದ್ಧೇಶ್ವರ ದೇವಸ್ಥಾನ ಪುನರ್‌ನಿರ್ಮಾಣ ಸಮಿತಿಯ ಸದಸ್ಯ ಡಾ.ವೈ.ಡಿ.ರಾಜಣ್ಣ ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ದೇಗುಲದಲ್ಲಿರುವ ಸಿದ್ಧೇಶ್ವರಸ್ವಾಮಿ, ಗಣೇಶ, ಮಹಿಷಮರ್ದಿನಿ ಹಾಗೂ ಸೂರ್ಯನ ವಿಗ್ರಹವು ಅತ್ಯಂತ ಮಹತ್ವ ಹೊಂದಿವೆ. ಶಿಥಿಲಗೊಂಡಿದ್ದ ಈ ದೇಗುಲದ ಪುನರ್‌ಜ್ಜೀವನಕ್ಕಾಗಿ 7 ವರ್ಷಗಳ ಹಿಂದೆಯೇ ಮುಜರಾಯಿ ಇಲಾಖೆಯ ಅನುಮತಿ ಪಡೆದು ಸಮಿತಿ ಸ್ಥಾಪಿಸಲಾಗಿತ್ತು. ಸಂಗ್ರಹಗೊಂಡಿದ್ದ ₹ 80 ಲಕ್ಷ ದೇಣಿಗೆಯನ್ನು ವಿನಿಯೋಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸಮಿತಿಯ ಗೌರವಾಧ್ಯಕ್ಷ ವೈ.ಎಸ್.ಯೋಗಾನಂದ, ಖಜಾಂಚಿ ವೈ.ಜಿ.ಸಿದ್ದೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT