ಬುಧವಾರ, ಅಕ್ಟೋಬರ್ 21, 2020
26 °C
ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಬುಧವಾರ ಅರಮನೆಯಿಂದ ಚಾಮುಂಡಿಬೆಟ್ಟಕ್ಕೆ ಕೊಂಡೊಯ್ಯಲಾಯಿತು

ಅರಮನೆಯಿಂದ ಬೆಟ್ಟಕ್ಕೆ ಉತ್ಸವ ಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ದಸರಾ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಸಿದ್ಧತೆ ಜೋರಾ ಗಿದ್ದು, ಜಂಬೂಸವಾರಿ ವೇಳೆ ಅಂಬಾರಿ ಯಲ್ಲಿ ಪ್ರತಿಷ್ಠಾಪನೆ ಆಗಲಿರುವ ಉತ್ಸವ ಮೂರ್ತಿಯನ್ನು ಬುಧವಾರ ಅಂಬಾವಿಲಾಸ ಅರಮನೆಯಿಂದ ಚಾಮುಂಡಿಬೆಟ್ಟಕ್ಕೆ ತೆಗೆದುಕೊಂಡು ಹೋಗಲಾಯಿತು.

ಸಾಂಪ್ರದಾಯಿಕವಾಗಿ ಪೂಜಾ ಕೈಂಕರ್ಯ ನಡೆಸುವ ಉದ್ದೇಶ ದಿಂದ ಅರಮನೆ ಮಂಡಳಿ ವತಿ ಯಿಂದ ಮುಜರಾಯಿ ಇಲಾಖೆಗೆ ಹಸ್ತಾಂತರಿ ಸಲಾಗಿದೆ. ಈ ಉತ್ಸವ ಮೂರ್ತಿಗೆ ಬೆಟ್ಟದಲ್ಲಿ ನವರಾತ್ರಿ ದಿನಗಳಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

‌ಪ್ರಧಾನ ಅರ್ಚಕ ಶಶಿಶೇಖರ್‌ ದೀಕ್ಷಿತ್‌ ನೇತೃತ್ವದಲ್ಲಿ ಶುಚಿಗೊಳಿಸಿ ಪೂಜೆಗೆ ಸಜ್ಜುಗೊಳಿಸಲಾಗುತ್ತದೆ. ಬೆಟ್ಟದಲ್ಲಿ ನಾಡಹಬ್ಬ ದಸರಾ ಉದ್ಘಾಟನೆ ವೇಳೆ ತಾಯಿಗೆ ಪುಷ್ಪಾರ್ಚನೆ ನಡೆಯಲಿದೆ. ಬೆಳ್ಳಿ ರಂಥದಲ್ಲಿ ಮೂರ್ತಿ ಇಡಲಾಗುತ್ತದೆ.

ಆ ಬಳಿಕ ಜಂಬೂಸವಾರಿ ದಿನ ಉತ್ಸವ ಮೂರ್ತಿಯನ್ನು ಮತ್ತೆ ಅರಮನೆಗೆ ತರಲಾಗುತ್ತದೆ. ಪಂಚಲೋಹದಿಂದ ಮಾಡಿರುವ ಈ ಮೂರ್ತಿಯನ್ನು 750 ಕೆ.ಜಿ.ತೂಕದ ಚಿನ್ನದ ಅಂಬಾರಿಯೊಳಗೆ ಪ್ರತಿಷ್ಠಾಪನೆ ಮಾಡಿ, ಅಭಿಮನ್ಯು ಆನೆ ಮೂಲಕ ಮೆರವಣಿಗೆ ಮಾಡಿಸಲಾಗುತ್ತದೆ. ಈ ಬಾರಿ ಅರಮನೆ ಆವರಣದಲ್ಲೇ ಜಂಬೂಸವಾರಿ ನಡೆಯಲಿದೆ.

ಚಾಮುಂಡೇಶ್ವರಿ ದೇಗುಲದ ಕಾರ್ಯನಿರ್ವಹಣಾಧಿಕಾರಿ ಯತೀಶ್‌, ಇಲಾಖೆಯ ಜಗದೀಶ್‌ ಕುಮಾರ್, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್‌.ಸುಬ್ರಮಣ್ಯ , ಅರಮನೆ ಭದ್ರತಾ ಎಸಿಪಿ ಚಂದ್ರಶೇಖರ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು