ಶುಕ್ರವಾರ, ಮಾರ್ಚ್ 24, 2023
22 °C
ತಾತಯ್ಯ ಉದ್ಯಾನದಲ್ಲಿ ಶವ ಪತ್ತೆ

ಮೈಸೂರು: ಮನೆಯಲ್ಲಿ ಬೀಗ ಮುರಿದು ಕಳ್ಳತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಲ್ಲಿನ ಕೆಆರ್‌ಎಸ್ ರಸ್ತೆಯ ಕೃಷ್ಣ ಬಡಾವಣೆಯಲ್ಲಿರುವ ಗಣೇಶ್ ಎಂಬುವವರ ಮನೆಯ ಬೀಗ ಮುರಿದಿರುವ ಕಳ್ಳರು ₹ 40 ಸಾವಿರ ನಗದು ಹಾಗೂ 1 ಲ್ಯಾಪ್‌ಟಾಪ್‌ನ್ನು ದೋಚಿದ್ದಾರೆ.

ಇವರು ಮಂಗಳವಾರ ಬೆಳಿಗ್ಗೆ ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿ ಸಂಜೆ ಹೊತ್ತಿಗೆ ಮನೆಗೆ ವಾಪಸ್ ಬಂದಾಗ ಕಳ್ಳತನವಾಗಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳರು ಇತ್ತೀಚೆಗೆ ಒಂಟಿ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದು, ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ದೇಗುಲದಲ್ಲಿ ಕಳ್ಳತನ
ಕೆ.ಆರ್.ನಗರ ತಾಲ್ಲೂಕಿನ ಮಾರ್ಚಳ್ಳಿಯಲ್ಲಿನ ಶ್ರೀರಾಮಮಂದಿರದ ಬಾಗಿಲು ಮುರಿದಿರುವ ಕಳ್ಳರು ಹುಂಡಿಯಲ್ಲಿದ್ದ ಹಣವನ್ನು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾತಯ್ಯ ಉದ್ಯಾನದಲ್ಲಿ ಶವ ಪತ್ತೆ
ಇಲ್ಲಿನ ನಗರ ಬಸ್‌ ನಿಲ್ದಾಣದ ಎದುರು ಇರುವ ತಾತಯ್ಯ ಉದ್ಯಾನದಲ್ಲಿ ವ್ಯಕ್ತಿಯೊಬ್ಬರ ಶವ ದೊರೆತಿದೆ. ಮೇಲ್ನೋಟಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ಮೂಡಿದೆ. ಕಳೆದೆರಡು ದಿನಗಳ ಹಿಂದೆಯೇ ಮೃತಪಟ್ಟಿದ್ದರಿಂದ ದೇಹವು ಕೊಳೆತಿದೆ. ಇವರ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು
ಮೈಸೂರು:
ಇಲ್ಲಿನ ಬೋಗಾದಿ ಸಮೀಪದ ಗಣಿಗರ ಹುಂಡಿಯ ನಿವಾಸಿ ಶಿವಕುಮಾರ್ (27) ದ್ವಿಚಕ್ರ ವಾಹನದಿಂದ ಬಿದ್ದು ಬುಧವಾರ ಮೃತಪಟ್ಟಿದ್ದಾರೆ.‌

ಇವರು ತಮ್ಮ ಸಂಬಂಧಿ ಅಭಿಷೇಕ್ ಜತೆ ದ್ವಿಚಕ್ರ ವಾಹನದಲ್ಲಿ ಬರುವಾಗ ಬೈಕ್‌ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಶಿವಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದರಿಂದ ಗಾಬರಿಗೊಂಡ ಅಭಿಷೇಕ್ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು