ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈನಾಡಿನಲ್ಲಿ ನಕ್ಸಲರು; ಗಡಿಯಲ್ಲಿ ಕಟ್ಟೆಚ್ಚರ

Last Updated 5 ಆಗಸ್ಟ್ 2021, 8:14 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಕೇರಳದ ವೈನಾಡು ಪ್ರದೇಶದ ಗಿರಿಜನ ಹಾಡಿಯಲ್ಲಿ ನಕ್ಸಲರು ಕರಪತ್ರ ಹಂಚಿ ಕಾಡಿನಲ್ಲಿ ನುಸುಳಿದ್ದು, ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಅವರನ್ನು ಸಂಪರ್ಕಿಸಿದಾಗ ಅವರು, ‘ನಕ್ಸಲ್ ನಿಗ್ರಹ ದಳವು ಬಾವಲಿ ಚೆಕ್‌ಪೋಸ್ಟ್‌ ಸಮೀಪದ ಗಡಿ ಭಾಗದಲ್ಲಿ ಹಾಗೂ ಅರಣ್ಯದಲ್ಲಿ ಶೋಧ ಕಾರ್ಯ ಆರಂಭಿಸಿದೆ’ ಎಂದು ತಿಳಿಸಿದರು.

ಕೊಡಗಿನ ಕುಟ್ಟ ಮತ್ತು ವಿರಾಜಪೇಟೆ ಆರ್ಜಿಯಲ್ಲಿರುವ ಎಎನ್‍ಎಫ್ ಕ್ಯಾಂಪ್‍ ಸಿಬ್ಬಂದಿ ಕುಟ್ಟ, ತೋಲ್ಪಟ್ಟಿ ಭಾಗದಲ್ಲಿಯೂ ಶೋಧ ನಡೆಸಿವೆ.

ದ್ವಿಚಕ್ರ ವಾಹನ ಕಳ್ಳತನ ಆರೋಪಿ ಬಂಧನ

ಮೈಸೂರು: ದ್ವಿಚಕ್ರ ವಾಹನ ಕಳ್ಳತನದ ಆರೋಪಿ ಗೌಸಿಯಾನಗರದ ಮಹಮ್ಮದ್ ಶಾಬಾಜ್ (21) ಎಂಬಾತನನ್ನು ಇಲ್ಲಿನ ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜತೆಗೆ, ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಯಿಂದ ₹ 6 ಲಕ್ಷ ಮೌಲ್ಯದ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆಲನಹಳ್ಳಿಯ, ಕೃಷ್ಣರಾಜ, ನಜರ್‌ಬಾದ್‌ನಲ್ಲಿ ತಲಾ 2 ಹಾಗೂ ಮೈಸೂರು ದಕ್ಷಿಣ ಠಾಣಾ ವ್ಯಾಪ್ತಿಯಲ್ಲಿ 1 ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಉದಯಗಿರಿ ಠಾಣೆಯ ಇನ್‌ಸ್ಪೆಕ್ಟರ್ ಪಿ.ಕೆ.ರಾಜು ನೇತೃತ್ವದಲ್ಲಿ ಸಬ್‌ಇನ್‌ಸ್ಪೆಕ್ಟರ್‌ಗಳಾದ ಸುನಿಲ್, ನಾಗರಾಜ ನಾಯಕ, ಸಿಬ್ಬಂದಿಯಾದ ಶಂಕರ್. ಸಿದ್ದೀಕ್ ಅಹಮದ್, ಸೋಮಶೇಖರ, ಮೋಹನ್ ಕುಮಾರ್, ಸಮೀರ್ ಶಿವರಾಜಪ್ಪ ಕಾರ್ಯಚರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT