ಗುರುವಾರ , ಅಕ್ಟೋಬರ್ 17, 2019
26 °C
ಪ್ರಾಣದ ಹಂಗು ತೊರೆದ ಸಾರ್ವಜನಿಕರು

ಜಂಬೂಸವಾರಿ ವೀಕ್ಷಿಸಲು ಜನ ಏರಿದ್ದ ಮರದ ರೆಂಬೆ ಬಿದ್ದು ವ್ಯಕ್ತಿಗೆ ಗಾಯ

Published:
Updated:

ಮೈಸೂರು: ಇಲ್ಲಿನ ಸಯ್ಯಾಜಿರಾವ್ ರಸ್ತೆಯಲ್ಲಿ ಜಂಬೂಸವಾರಿ ವೀಕ್ಷಿಸಲು ಜನರು ಏರಿದ್ದ ಮರದ ರೆಂಬೆಯು ತುಂಡಾಗಿ ಪ್ರಕಾಶ್ ಎಂಬ ವ್ಯಕ್ತಿ ಗಾಯಗೊಂಡರು.

ಉದ್ಬೂರಿನಿಂದ ಪುತ್ರಿಯೊಂದಿಗೆ ಬಂದಿದ್ದ ಇವರು ಲಯನ್ಸ್ ಸಂಸ್ಥೆಯವರು ಹಾಕಿದ್ದ ಶಾಮಿಯಾನದ ಕೆಳಗೆ ಕುಳಿತಿದ್ದರು. ಭಾರ ತಾಳಲಾರದೇ ರೆಂಬೆಯು ಮುರಿಯುತ್ತಿದ್ದಂತೆ ಮೇಲೇರಿದ್ದ ಯುವಕರು ಕೆಳಗೆ ಹಾರಿ ಪಾರಾದರು. ಮುರಿದ ರೆಂಬೆಯು ಶಾಮಿಯಾನದ ಮೇಲೆ ಬಿತ್ತು. ಇಷ್ಟರಲ್ಲಿ ಶಾಮಿಯಾನದ ಕೆಳಗೆ ಕುಳಿತಿದ್ದವರು ಚಿಲ್ಲಾಪಿಲ್ಲಿಯಾಗಿ ಓಡಿದರು. ಈ ವೇಳೆ ಪ್ರಕಾಶ್ ಗಾಯಗೊಂಡರು.


ಮೆರೆವಣಿಗೆ ನೋಡಲು ಸೇರಿದ್ದ ಜನರ ಮೇಲೆ ಮರದ ರಂಬೆ ಮುರಿದು ಬಿದ್ದಿರುವುದು.

ಎದೆ ಮತ್ತು ಹೊಟ್ಟೆ ಭಾಗದಲ್ಲಿ ಆದ ಗಾಯಗಳಿಂದ ನರಳುತ್ತಿದ್ದ ಇವರನ್ನು ಅಗ್ನಿಶಾಮಕ ಪಡೆಯ ರಕ್ಷಣಾ ತಂಡ ತಕ್ಷಣವೇ ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿತು. ‌ಇವರ ಪುತ್ರಿಯ ರೋದನ ಮುಗಿಲುಮುಟ್ಟಿತ್ತು.

ಶಿಥಿಲಗೊಂಡಿರುವ ಲ್ಯಾನ್ಸ್‌ಡೌನ್‌ ಹಾಗೂ ದೇವರಾಜ ಮಾರುಕಟ್ಟೆಯ ಕಟ್ಟಡದ ಮೇಲೆ ಈ ಬಾರಿಯೂ ಪ್ರಾಣದ ಹಂಗನ್ನು ತೊರೆದ ಜನರು ನೂರಾರು ಸಂಖ್ಯೆಯಲ್ಲಿ ಏರಿ ಜಂಬೂಸವಾರಿ ವೀಕ್ಷಿಸಿದರು.

Post Comments (+)