ಭಾನುವಾರ, ನವೆಂಬರ್ 17, 2019
24 °C

ಕೊಳ್ಳೇಗಾಲದ ಯುವತಿಯೊಂದಿಗೆ ಇಸ್ರೇಲ್‌ನ ಯುವಕನ ವಿವಾಹ

Published:
Updated:
Prajavani

ಹಂಪಾಪುರ: ಕೊಳ್ಳೇಗಾಲದ ಯುವತಿಯೊಂದಿಗೆ ಇಸ್ರೇಲ್‌ನ ಯುವಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸಮೀಪದ ತೆರಣಿಮುಂಟಿ ಗ್ರಾಮದ ರವಿರಾಮೇಶ್ವರ ದೇವಾಲಯದಲ್ಲಿ ಇಸ್ರೇಲ್‌ನ ಯೂರಿ ಮತ್ತು ಮರೀನಾ ದಂಪತಿ ಪುತ್ರ ಮೈಕೆಲ್ ಹಾಗೂ ಕೊಳ್ಳೇಗಾಲದ ನಿವಾಸಿ ಪಾಲ್‌ಗಾಟ್ ಅಯ್ಯರ್‌ ಶರ್ಮ ಹಾಗೂ ಶೋಭಾ ದಂಪತಿ ಪುತ್ರಿ ರೇವತಿ ನಾಲ್ಕು ದಿನಗಳ ಹಿಂದೆ ಸರಳವಾಗಿ ಮದುವೆಯಾಗಿದ್ದಾರೆ. ರವಿರಾಮೇಶ್ವರ ದೇವಾಲಯದ ಅರ್ಚಕ ಭಾಸ್ಕರ್‌ ಪೌರೋಹಿತ್ಯ ವಹಿಸಿದ್ದರು.

ಪ್ರತಿಕ್ರಿಯಿಸಿ (+)