ಮೈ ನವಿರೇಳಿಸಿದ ‘ಜಾವಾ’ ಜಾಥಾ

7
‘ಯಜ್ಡಿ, ಜಾವಾ ಫ್ಯಾನ್ಸ್ ಕ್ಲಬ್‌’ ವತಿಯಿಂದ ನಡೆದ ರ‍್ಯಾಲಿ

ಮೈ ನವಿರೇಳಿಸಿದ ‘ಜಾವಾ’ ಜಾಥಾ

Published:
Updated:
ಮೈಸೂರಿನಲ್ಲಿ ಜಾವಾ ದಿನಾಚರಣೆ ಅಂಗವಾಗಿ ಭಾನುವಾರ ನಡೆದ ರ‍್ಯಾಲಿಯಲ್ಲಿ ನೂರಾರು ಜಾವಾ, ಯಜ್ಡಿ ಬೈಕುಗಳು ಭಾಗವಹಿಸಿದ್ದವು

ಮೈಸೂರು: ಮೈಸೂರಿನಲ್ಲಿ ಭಾನುವಾರ ಎದೆಗಡಚಿಕ್ಕುವ ಬೈಕುಗಳದ್ದೇ ಸದ್ದು. 60, 70ರ ದಶಕದಲ್ಲಿ ನಿರಂತರವಾಗಿ ರಸ್ತೆಗಳನ್ನು ಅಕ್ಷರಶಃ ಆಳಿದ್ದ ನೂರಕ್ಕೂ ಹೆಚ್ಚು ಜಾವಾ, ಯಜ್ಡಿ ಬೈಕ್‌ಗಳು ಇಲ್ಲಿ ರಸ್ತೆಗಿಳಿದಿದ್ದವು. ಜನರ ಬೆರಗುಗಣ್ಣುಗಳನ್ನು ತಮ್ಮತ್ತ ಸೆಳೆದುಕೊಂಡವು.

ಅಂತರರಾಷ್ಟ್ರೀಯ ಜಾವಾ ದಿನಾಚರಣೆ ಭಾನುವಾರ ರಂಗೇರಿತ್ತು. ವಿಶ್ವಖ್ಯಾತಿಯ ಈ ಬೈಕುಗಳ ಕಾರ್ಖಾನೆಯು ಮೈಸೂರಿನಲ್ಲೇ ಇದ್ದ ಕಾರಣ, ಬೈಕುಗಳನ್ನು ಹೊಂದಿರುವ ಮಾಲೀಕರು ಹೆಮ್ಮೆಯಿಂದ ರಸ್ತೆಗೆ ಇಳಿದಿದ್ದರು. ಇದಕ್ಕಾಗಿದೇ ಸಿದ್ಧಗೊಳಿಸಿದ್ದ ನೀಲಿ ಬಣ್ಣದ ವಿಶೇಷ ಟೀ–ಶರ್ಟ್‌ಗಳನ್ನೂ ಧರಿಸಿ ಸಂಭ್ರಮವನ್ನು ದ್ವಿಗುಣಗೊಳಿಸಿದ್ದರು.

ತರಾವರಿ ಬೈಕ್‌ಗಳು:

ಮೈಸೂರಿನ ‘ಯಜ್ಡಿ, ಜಾವಾ ಫ್ಯಾನ್ಸ್ ಕ್ಲಬ್‌’ ವತಿಯಿಂದ ಏರ್ಪಡಿಸಿದ್ದ ರ‍್ಯಾಲಿ ನಡೆಯಿತು. ನಜರಬಾದಿನಲ್ಲಿರುವ ಜಾವಾ ಕಾರ್ಖಾನೆಯ ಮಾಲೀಕರಾಗಿದ್ದ ಎಫ್‌.ಕೆ.ಇರಾನಿ ಅವರ ಮನೆಯ ಮುಂದೆ ಸೇರಿದ ಜಾವಾ ಬೈಕ್‌ ಮಾಲೀಕರು ಮೆರವಣಿಗೆ ಸಾಗಿದರು. ಹಾರ್ಡಿಂಗ್ ವೃತ್ತ, 100 ಅಡಿ ರಸ್ತೆ, ನ್ಯೂ ಕಾಂತರಾಜ ಅರಸ್ ರಸ್ತೆ, ಕುವೆಂಪುನಗರ ಡಬಲ್ ರಸ್ತೆ, ಜಾವಾ ಫ್ಯಾಕ್ಟರಿಗೆ ತಲುಪಿತು. ಬಳಿಕ ಬೈಕ್ ಸವಾರರು ಶ್ರೀರಂಗಪಟ್ಟಣದವರೆಗೆ ಸಾಗಿದರು.

ರ‍್ಯಾಲಿಯಲ್ಲಿ ತರಾವರಿ ಮಾದರಿಯ ಬೈಕ್‌ಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಜಾವಾ 250, ಯಜ್ಡಿ ಕ್ಲಾಸಿಕ್‌, ಯಜ್ಡಿ ರೋಡ್‌ಕಿಂಗ್, ಮಾನಾರ್ಕ್‌ ಕೋಲ್ಟ್‌ ಸೇರಿದಂತೆ ಅನೇಕ ಅವತರಣಿಕೆಯ ಬೈಕ್‌ಗಳು ಇದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !