ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಪುರದ ಬಳಿ ಕಾಡಾನೆಗಳು: ಆತಂಕ

Last Updated 3 ಮೇ 2019, 4:20 IST
ಅಕ್ಷರ ಗಾತ್ರ

ಈ ಸುದ್ದಿಯನ್ನು ರಾತ್ರಿ 1 ಗಂಟೆಗೆ ಶೆಡೂಲ್ ಮಾಡಿರಿ...

ಮೈಸೂರು: ನಗರದಿಂದ 16 ಕಿ.ಮೀ ದೂರದಲ್ಲಿರುವ ಜಯಪುರದ ಬಳಿ ಎರಡು ಕಾಡಾನೆಗಳು ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿವೆ. ಸ್ಥಳಕ್ಕೆ ದೌಡಾಯಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ, ‘ಅಭಿಮನ್ಯು’ ಮತ್ತು ‘ಕೃಷ್ಣ’ ಎಂಬ ಸಾಕಾನೆಗಳ ಮೂಲಕ ಅವುಗಳನ್ನು ಕಾಡಿಗೆ ಓಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ನಾಗರಹೊಳೆ ಹುಲಿ ರಕ್ಷಿತಾರಣ್ಯದಿಂದ ನುಗು ಜಲಾಶಯಕ್ಕೆ ಬಂದಿರುವ ಈ ಆನೆಗಳು, ಕಳೆದೆರಡು ದಿನಗಳಿಂದ ಜಯಪುರದ ಹೊರವಲಯದ ಜಮೀನಿನಲ್ಲಿ ಬೀಡುಬಿಟ್ಟಿವೆ. ಹಲವು ಎಕರೆಯಷ್ಟು ಕಬ್ಬು ಹಾಗೂ ಮತ್ತಿತರ ಬೆಳೆಗಳನ್ನು ನಾಶಪಡಿಸಿವೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳಕ್ಕೆ ತೆರಳಿ ಆನೆಗಳನ್ನು ಓಡಿಸಲು ಯತ್ನಿಸಿದರಾದರೂ ಆನೆಗಳು ಕಾಡಿನತ್ತ ತೆರಳಲಿಲ್ಲ.

ಗುರುವಾರ, ಸಾಕಾನೆಗಳನ್ನು ಕರೆಸಿಕೊಂಡ ಸಿಬ್ಬಂದಿ ಆನೆಗಳನ್ನು ಓಡಿಸಲು ಮುಂದಾಗಿದ್ದಾರೆ. ಸದ್ಯ, ಜಯಪುರದಿಂದ ಮುಂದೆ ಹಾರೋಹಳ್ಳಿ ಸಮೀಪದ ಚಿಕ್ಕನಹಳ್ಳಿ ಕಾಡಿನತ್ತ ಆನೆಗಳು ಹೊರಟಿವೆ ಎಂದು ಡಿಸಿಎಫ್ ಪ್ರಶಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT