ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 13–6–1968

Last Updated 12 ಜೂನ್ 2018, 19:02 IST
ಅಕ್ಷರ ಗಾತ್ರ

ಪಿ.ಯು.ಸಿ. ಪ್ರವೇಶ ವಯೋಮಿತಿ ನಿಯಮ ಸದ್ಯಕ್ಕೆ ರದ್ದು

ಬೆಂಗಳೂರು, ಜೂನ್ 12– ಪ್ರಿ ಯೂನಿರ್ವಸಿಟಿ ತರಗತಿಯ ಪ್ರವೇಶಕ್ಕೆ ನಿಗದಿ ಮಾಡಲಾಗಿದ್ದ 15 ವರ್ಷ ವಯೋಮಿತಿಯ ನಿಯಮವನ್ನು 1970ರ ತನಕ ಅಮಾನತ್ತಿನಲ್ಲಿಡಲು ಬೆಂಗಳೂರು ವಿಶ್ವವಿದ್ಯಾನಿಲಯದ ಅಕೆಡೆಮಿಕ್ ಕೌನ್ಸಿಲ್ ತೀರ್ಮಾನಿಸಿದೆ.

**

ಆರ್ಟ್ಸ್, ಸೈನ್ಸ್, ಕಾಮರ್ಸ್ ಡಿಗ್ರಿ ತರಗತಿಗಳಲ್ಲಿ ಕನ್ನಡ ಐಚ್ಛಿಕ ಮಾಧ್ಯಮ

ಬೆಂಗಳೂರು, ಜೂನ್‌ 12– 1968–69ನೇ ಸಾಲಿನಿಂದ ಬಿ.ಎ., ಬಿ.ಎಸ್‌ಸಿ., ಬಿ.ಕಾಂ. ಪದವಿ ಶಿಕ್ಷಣದಲ್ಲಿ ಕನ್ನಡವನ್ನು ಐಚ್ಛಿಕ ಶಿಕ್ಷಣ ಮಾಧ್ಯಮವನ್ನಾಗಿ ಜಾರಿಗೆ ತರಲು ಬೆಂಗಳೂರು ವಿಶ್ವವಿದ್ಯಾನಿಲಯದ ಅಕೆಡೆಮಿಕ್ ಕೌನ್ಸಿಲ್ ನಿರ್ಧರಿಸಿದೆ.

**

ಈ ವರ್ಷದಿಂದ ಮೂರು ವರ್ಷದ ಲಾ ಶಿಕ್ಷಣ

ಬೆಂಗಳೂರು, ಜೂನ್‌ 12– ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ 68–69ನೇ ಸಾಲಿನಿಂದ 3 ವರ್ಷ ಅವಧಿಯ ಲಾ ಪದವಿ ಶಿಕ್ಷಣ ಆರಂಭವಾಗುವುದು.

ಈ ಯೋಜನೆಯನ್ನು ಈ ವರ್ಷದಿಂದ ಜಾರಿಗೆ ತರಲು ಅಕೆಡೆಮಿಕ್ ಕೌನ್ಸಿಲ್ ನಿರ್ಣಯ ಮಾಡಿದೆ.

**

ಕೃಷ್ಣಾ ವಿವಾದ: ಪಂಚಾಯಿತಿಗೆ ಒಪ್ಪಿಸಲು ಕಷ್ಟವಿಲ್ಲ

ಬೆಂಗಳೂರು, ಜೂನ್‌ 12– ಸಂಬಂಧಪಟ್ಟ ಎಲ್ಲ ರಾಜ್ಯಗಳು ಪಂಚಾಯಿತಿ ರಚಿಸಬೇಕೆಂದು ಕೇಳಿರುವಾಗ, ಕೃಷ್ಣಾನದಿ ನೀರು ವಿವಾದದ ಇತ್ಯರ್ಥಕ್ಕೆ ಪಂಚಾಯಿತಿಯನ್ನು ನೇಮಿಸಲು ಕೇಂದ್ರಕ್ಕೆ ಕಷ್ಟವೇನೂ ಇಲ್ಲವೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT