ಭಾನುವಾರ, ಆಗಸ್ಟ್ 25, 2019
23 °C
`ಮನಸ್ಸು ಮತ್ತು ಲೈಂಗಿಕತೆ' ಕುರಿತ ಅಂತರರಾಷ್ಟ್ರೀಯ ಸಮ್ಮೇಳನ

ನಕರಾತ್ಮಕ ಚಿಂತನೆಗಳಿಂದ ದೂರವಿರಿ: ಮೃಗೇಶ್ ವೈಷ್ಣವ್

Published:
Updated:
Prajavani

ಮೈಸೂರು: ‘ನಕರಾತ್ಮಕ ಚಿಂತನೆಗಳಿಂದ ದೂರವಿರಿ’ ಎಂದು ಭಾರತೀಯ ಮನೋವೈದ್ಯ ಸಮಾಜದ ಅಧ್ಯಕ್ಷ ಮೃಗೇಶ್ ವೈಷ್ಣವ್ ಸಲಹೆ ನೀಡಿದರು.

ಭಾರತೀಯ ಮನೋ ವೈದ್ಯಕೀಯ ಸಂಘ ನಗರದ ಜೆಎಸ್‍ಎಸ್ ಆಸ್ಪತ್ರೆಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ’ಮನಸ್ಸು ಮತ್ತು ಲೈಂಗಿಕತೆ' ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು,`ಮಾನಸಿಕ ಸ್ವಾಸ್ಥ್ಯವಾಗಿರಬೇಕಾದರೆ, ಎಲ್ಲರೂ ನಕರಾತ್ಮಕ ಚಿಂತನೆಗಳಿಂದ ದೂರವಿರಬೇಕು’ ಎಂದು ಹೇಳಿದರು.

‘ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ನಕರಾತ್ಮಕ ಚಿಂತನೆಗಳು ಪರಿಣಾಮ ಬೀರುತ್ತವೆ. ಆದ್ದರಿಂದ ನಕರಾತ್ಮಕ ಯೋಚನೆಗಳಿಗೆ ಒಳಗಾಗದೆ, ಸಕರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಿ’ ಎಂದು ತಿಳಿಸಿದರು.

ಸಮ್ಮೇಳನ ಉದ್ಘಾಟಿಸಿದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ‘ಮೈಸೂರು ರಾಜ ಮನೆತನವು ಶಿಕ್ಷಣ, ಆರೋಗ್ಯ ಮತ್ತು ವಿಜ್ಞಾನ–ತಂತ್ರಜ್ಞಾನ ಸೇರಿದಂತೆ, ಮುಂತಾದ ಕ್ಷೇತ್ರಗಳಿಗೆ ಮಹತ್ತರವಾದ ಕೊಡುಗೆ ನೀಡಿದೆ. ಎಲ್ಲಾ ಕ್ಷೇತ್ರಗಳಿಗೂ ಪ್ರೋತ್ಸಾಹ ನೀಡಿದೆ. ಇದರ ಫಲವಾಗಿ ಮೈಸೂರು ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ’ ಎಂದರು.

ಜೆಎಸ್‍ಎಸ್ ಅಕಾಡೆಮಿಯ ಹೈಯರ್ ಎಜುಕೇಷನ್ ಅಂಡ್ ರಿಸರ್ಚ್‍ನ ಪ್ರಭಾರ ಕುಲಪತಿ ಡಾ.ಎನ್.ಬಸವನಗೌಡಪ್ಪ, ಜೆಎಸ್‍ಎಸ್ ಆಸ್ಪತ್ರೆ ನಿರ್ದೇಶಕ ಡಾ.ದಯಾನಂದ ಉಪಸ್ಥಿತರಿದ್ದರು.

ಇದೇ ವೇಳೆ ’ಲೈಂಗಿಕತೆ ಮತ್ತು ಮನಸ್ಸು' ವಿಷಯಕ್ಕೆ ಸಂಬಂಧಪಟ್ಟ ಪುಸ್ತಕಗಳು, ಲೈಂಗಿಕತೆಗೆ ಸಂಬಂಧಿಸಿದ ಪರಿಕರಗಳನ್ನು ಪ್ರದರ್ಶಿಸಲಾಯಿತು.

Post Comments (+)