ಕಬನಿ: 15 ವರ್ಷಗಳ ಬಳಿಕ 50 ಸಾವಿರ ಕ್ಯುಸೆಕ್‌ ನೀರು ಹೊರಕ್ಕೆ

7

ಕಬನಿ: 15 ವರ್ಷಗಳ ಬಳಿಕ 50 ಸಾವಿರ ಕ್ಯುಸೆಕ್‌ ನೀರು ಹೊರಕ್ಕೆ

Published:
Updated:
ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಿಂದ 50 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ

ಎಚ್.ಡಿ.ಕೋಟೆ: 15 ವರ್ಷಗಳ ಬಳಿಕ ಕಬಿನಿ ಜಲಾಶಯದಿಂದ 50 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

‘ಕೇರಳದ ವೈನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದ್ದು ಜಲಾಶಯದ ಹಿತದೃಷ್ಟಿಯಿಂದ  ಒಳಹರಿವಿನಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. 19.9 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯ ಪ್ರಸಕ್ತ ವರ್ಷ ಜೂನ್‌ ಮಧ್ಯಭಾಗದಲ್ಲೇ ಭರ್ತಿಯಾಗಿದ್ದು, ಈ ಮುಂಗಾರಿನಲ್ಲಿ ಈವರೆಗೂ 25 ಟಿಎಂಸಿ ಅಡಿ ನೀರನ್ನು ಹೊರಬಿಡಲಾಗಿದೆ’ ಎಂದು ಕಬಿನಿ ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್‌ ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಬಾಣಸೂರು ಡ್ಯಾಂ ಬಳಿ ಇರುವ ಮಾಪನ ಕೇಂದ್ರದಿಂದ ಕ್ಷಣ ಕ್ಷಣದ ಮಾಹಿತಿ ನೀಡುತ್ತಿದ್ದು, ಅಲ್ಲಿ ಹೊರ ಹರಿವಿನ ಪ್ರಮಾಣ ಹೆಚ್ಚಿದರೆ ಇಲ್ಲೂ ನಾವು ಹೊರ ಹರಿವನ್ನು ಹೆಚ್ಚಿಸುತ್ತೇವೆ. ಕಬಿನಿ ಜಲಾಶಯದ ಕ್ರಸ್ಟ್‌ ಗೇಟ್‌ ಮೂಲಕ 1.45 ಲಕ್ಷ ಕ್ಯುಸೆಕ್ ವರೆಗೂ ನೀರನ್ನು ನದಿಗೆ ಹರಿಸಬಹುದು. ಆದರೆ, ಅಷ್ಟು ಪ್ರಮಾಣದ ನೀರನ್ನು ಹೊರಕ್ಕೆ ಬಿಟ್ಟರೆ ಕೆ.ಬೆಳತ್ತೂರು, ಮಾದಾಪುರ ಮತ್ತು ತುಂಬಸೋಗೆ ಸೇತುವೆಗಳೆಲ್ಲ ಮುಳುಗಡೆಯಾಗುತ್ತವೆ. ಇದರಿಂದಾಗಿ ಜನರು ಮುನ್ನೆಚ್ಚರಿಕೆಯ ಕ್ರಮವಾಗಿ  ನದಿ ಸಮೀಪದಲ್ಲಿ ಇರುವವರು ಸುರಕ್ಷಿತ ಜಾಗಕ್ಕೆ ತೆರಳಬೇಕು’ ಎಂದು ಎಚ್ಚರಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !