ಶನಿವಾರ, ಜನವರಿ 25, 2020
28 °C

ಕಡವೆ ಬೇಟೆ: ವ್ಯಕ್ತಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಿರಿಯಾಪಟ್ಟಣ: ತಾಲ್ಲೂಕಿನ ಆನೆಚೌಕೂರು ಅರಣ್ಯ ಪ್ರದೇಶದಲ್ಲಿ ಕಡವೆಯನ್ನು ಬೇಟೆಯಾಡಿ, ಮಾಂಸ ಸಂಗ್ರಹಿಸಿಟ್ಟಿದ್ದ ವ್ಯಕ್ತಿಯನ್ನು ವನ್ಯಜೀವಿ ಅರಣ್ಯ ವಲಯದ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ.

ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಸ್ವಾಮಿ ಬಂಧಿತ ಆರೋಪಿ.

ಆನೆಚೌಕೂರು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿನ ಲಕ್ಷ್ಮೀಪುರ ಗ್ರಾಮದ ತಂಬಾಕು ಬ್ಯಾರನ್‌ನಲ್ಲಿ ಕಡವೆ ಮಾಂಸ ಸಂಗ್ರಹಿಸಿಟ್ಟಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಆರ್‌ಎಫ್ಓ ಎಸ್.ಹನುಮಂತರಾಜ್ ನೇತೃತ್ವದ ತಂಡ 80 ಕೆ.ಜಿ. ಕಡವೆ ಮಾಂಸ ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿದೆ. ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿಆರ್‌ಎಫ್ಓಗಳಾದ ರತ್ನಾಕರ, ನಂಜಪ್ಪ, ಅರಣ್ಯ ರಕ್ಷಕರಾದ ದಿವಾಕರ, ಸಂಜಯ್ ಕುಮಾರ್, ಸಿಬ್ಬಂದಿಗಳಾದ ಅರುಣ್ ಕುಮಾರ್, ಪ್ರಸನ್ನ, ನಿಂಗರಾಜು, ಮಲ್ಲಪ್ಪ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)