ಮಂಗಳವಾರ, ನವೆಂಬರ್ 19, 2019
26 °C

ಕನಕ ಭವನ ನಿರ್ಮಾಣ ಹಣ ದುರುಪಯೋಗ ಆರೋಪ

Published:
Updated:

ಮೈಸೂರು: ಎಚ್.ಡಿ.ಕೋಟೆಯ ಕಾಳಿದಾಸ ತಾಲ್ಲೂಕು ಕುರುಬ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಪ್ಪ ಕೋಟೆ ಅವರು ಸರ್ಕಾರದ ಅನುದಾನದಲ್ಲಿ ಕನಕ ಭವನ ನಿರ್ಮಾಣ ವೇಳೆ ಹಣ ದುರುಪಯೋಗ ನಡೆಸಿದ್ದು, ತನಿಖೆ ನಡೆಸುವಂತೆ ಎಚ್‌.ಡಿ.ಕೋಟೆ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಗೋವಿಂದರಾಜು ಒತ್ತಾಯಿಸಿದರು.

‘ಅ. 19ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ನಾವು ಭಾಗವಹಿಸುತ್ತಿಲ್ಲ. ಅವರು ಸಂಘದ ಅಧ್ಯಕ್ಷರೆಂದು ಹೇಳಿಕೊಳ್ಳಲು ನಮ್ಮೆಲ್ಲರ ವಿರೋಧವಿದೆ’ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

2011ರಲ್ಲಿ ಅಧ್ಯಕ್ಷರಾಗಿದ್ದ ರಾಮಸ್ವಾಮಿ ಅವರ ನಿಧನ ನಂತರ, ಕಾರ್ಯದರ್ಶಿಯಾಗಿದ್ದ ಶಿವಪ್ಪ ಕೋಟೆ ತಾವೇ ಅಧ್ಯಕ್ಷರೆಂದು ಘೋಷಿಸಿಕೊಂಡಿದ್ದಾರೆ. ಬಳಿಕ ಚುನಾವಣೆ ನಡೆಸದೇ, ಸಂಘವನ್ನು ನವೀಕರಿಸದೇ ಅಕ್ರಮವಾಗಿ ಮುಂದುವರಿದ್ದಾರೆ ಎಂದು ಆರೋಪಿಸಿದರು.

ಮುಖಂಡರು ನಾಗೇಗೌಡ, ಜಗನ್ನಾಥ್, ಕರಿಯಪ್ಪ, ಮಹದೇವು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)