ಕನ್ನಡ ಓದು, ಬರಹ ಅತ್ಯಗತ್ಯ

7

ಕನ್ನಡ ಓದು, ಬರಹ ಅತ್ಯಗತ್ಯ

Published:
Updated:
Deccan Herald

ಮೈಸೂರು: ಕನ್ನಡ ಓದುವುದು ಬರೆಯುವುದು ಕಡಿಮೆಯಾದರೆ ಕನ್ನಡದ ಅವನತಿ ಸಾಧ್ಯತೆಯಿದೆ ಎಂದು ಹಿರಿಯ ಸಾಹಿತಿ ಆರ‍್ಯಾಂಬ ಪಟ್ಟಾಭಿ ಆತಂಕ ವ್ಯಕ್ತಪಡಿಸಿದರು.

ಶಾರದಾದೇವಿ ಮಹಿಳಾ ಸಮಾಜ, ಕ್ಯುಡಿಪಿ ಟೆಕ್ನಾಲಜೀಸ್ ಕಂಪ್ಯೂಟರ್ ತರಬೇತಿ ವಿಭಾಗವು ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ‘ಸಿಎಸ್‌ಆರ್’ ಕಂಪ್ಯೂಟರ್ ಉಚಿತ ತರಬೇತಿಗೆ ಗುರುತಿನ ಚೀಟಿ ವಿತರಣೆ ಹಾಗೂ ಗಾಯತ್ರಿ ಸುಂದರೇಶ್ ಅವರ 'ಪಾರಿಜಾತ' ಕಥಾಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡ ಮಾತನಾಡುವುದು, ಓದುವುದು ಬರೆಯುವುದು ನಾಚಿಕೆಯ ವಿಚಾರವಲ್ಲ. ಇದನ್ನು ಕನ್ನಡಿಗರು ಅರ್ಥ ಮಾಡಿಕೊಂಡಲ್ಲಿ ಭಾಷೆ ಉಳಿಯುತ್ತದೆ. ಇದನ್ನು ಅರಿತು ಪೋಷಕರು ಮಕ್ಕಳಿಗೆ ಕನ್ನಡ ಕಲಿಸಬೇಕು. ಕನ್ನಡ ಕಲಿತಷ್ಟು ಒಳ್ಳೆಯದೇ ಆಗುವುದೇ ಹೊರತು ನಷ್ಟವಾಗುವುದಿಲ್ಲ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಓದುತ್ತಿರುವುದು ಪಠ್ಯ ಪುಸ್ತಕಗಳನ್ನು ಮಾತ್ರ. ಇದರ ಜತೆಗೆ, ಕತೆ, ಕಾದಂಬರಿ, ಕವಿತೆಗಳನ್ನೂ ಓದಬೇಕು. ಇದರಿಂದ ಭಾಷೆಯ ಬಗ್ಗೆ ಪ್ರೀತಿ ಬೆಳೆಯುತ್ತದೆ. ಆದ್ದರಿಂದ ಶಾಲಾ - ಕಾಲೇಜುಗಳಲ್ಲಿ ಕಥಾ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಇತಿಹಾಸ ತಜ್ಞ ಈಚನೂರು ಕುಮಾರ್ ಅತಿಥಿಯಾಗಿದ್ದರು. ಇದೇ ಸಂದರ್ಭದಲ್ಲಿ 250 ವಿದ್ಯಾರ್ಥಿಗಳಿಗೆ ‘ಸಿಎಸ್‌ಆರ್’ ಕಂಪ್ಯೂಟರ್ ಉಚಿತ ತರಬೇತಿಗೆ ಗುರುತಿನ ಚೀಟಿ ವಿತರಿಸಲಾಯಿತು. ಕ್ಯುಡಿಪಿ ಟೆಕ್ನಾಲಜೀಸ್ ನಿರ್ದೇಶಕ ಕೆ.ಎಸ್.ವೆಂಕಟೇಶ್, ನಿವೃತ್ತ ಡಿವೈಎಸ್‌ಪಿ ಕೃಷ್ಣಮೂರ್ತಿ, ಆರ್ಯ ಈಡಿಗರ ಸಂಘದ ಉಪಾಧ್ಯಕ್ಷ ರಾಜಶೇಖರ ಕದಂಬ ಭಾಗವಹಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !