ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ದಲ್ಲಾಳಿಗಳ ವಂಚನೆ ತಪ್ಪಿಸುವ ಉದ್ದೇಶ, ಕುರಿ– ಮೇಕೆ ಮಾರಾಟಕ್ಕೆ ಆ್ಯಪ್‌!

Last Updated 20 ಆಗಸ್ಟ್ 2022, 4:23 IST
ಅಕ್ಷರ ಗಾತ್ರ

ಮೈಸೂರು: ಕುರಿ, ಮೇಕೆ ಸಾಕಣೆದಾರರು ಹಾಗೂ ಖರೀದಿದಾರರ ನಡುವೆ ನೇರ ಸಂಪರ್ಕ, ಸಂವಹನಕ್ಕೆ ಅನುವು ಮಾಡಿಕೊಡಲು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ‘ಆ್ಯಂಡ್ರಾಯ್ಡ್ ಆ್ಯಪ್‌’ ರೂಪಿಸಿದೆ.

ದಲ್ಲಾಳಿಗಳಿಂದ ವಂಚನೆಯನ್ನು ತಪ್ಪಿಸಲು, ಲಾಭವು ನೇರವಾಗಿ ಸಾಕಣೆದಾರರಿಗೆ ಸಿಗಲು ನಿಗಮವು ಕ್ರಮ ಕೈಗೊಂಡಿದ್ದು,ಕೇಂದ್ರ ಸರ್ಕಾರದ ‘ಎನ್‌ಸಿಡಿಇಎಕ್ಸ್‌’ನ ‘ನ್ಯಾಷನಲ್‌ ಇ ಮಾರ್ಕೆಟಿಂಗ್‌ ಲಿಮಿಟೆಡ್‌’ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದೆ.

ಸಾಕಣೆದಾರರು ಹಾಗೂ ರೈತ ಉತ್ಪಾದಕ ಸಂಘಗಳ ಪ್ರತಿನಿಧಿಗಳಿಗೆ ಪ್ರಾಯೋಗಿಕ ತರಬೇತಿಯನ್ನು ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ, ಕಲಬುರ್ಗಿ, ಬೆಳಗಾವಿ ಜಿಲ್ಲೆಗಳಲ್ಲಿ ನಿಗಮವು ನೀಡುತ್ತಿದೆ.

‘ಸಂತೆಗಳಲ್ಲಿ ಕುರಿಗಳ ಮಾರಾಟದಲ್ಲಿ ದಳ್ಳಾಳಿಗಳ ಹಾವಳಿಯಿದೆ. ಸಂಜೆವರೆಗೂ ಕಾಯಿಸಿ ಬೇಕಾದ ಬೆಲೆಗೆ ಕೊಳ್ಳುವುದರಿಂದ ಸಾಕಣೆದಾರರು ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿಯೇ ನಿಗಮವು ಡಿಜಿಟಲ್‌ ವಹಿವಾಟು ಉತ್ತೇಜಿಸಲು ಆ್ಯಪ್‌ ರೂಪಿಸಿದೆ’ ಎಂದು ನಿಗಮದ ಸಹಾಯಕ ನಿರ್ದೇಶಕ ಡಾ.ಮ.ಪು.ಪೂರ್ಣಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಷ್ಟ್ರದಲ್ಲಿಯೇ ಮೊದಲ ಬಾರಿಗೆಡಿಜಿಟಲ್‌ ವಹಿವಾಟು ರಾಜ್ಯದಲ್ಲಿ ನಡೆಯುತ್ತಿದ್ದು, ನಿಗಮದ ಕ್ರಮವನ್ನು ಪ‍್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಆ್ಯಪ್‌ ಬಳಕೆ ಮಾಹಿತಿಯನ್ನು ಸಾಕಣೆದಾರರು ಹಾಗೂ ಗ್ರಾಹಕರಲ್ಲಿ ಅರಿವು ಮೂಡಿಸಲು ನಿಗಮ ಹಾಗೂ ರೈತ ಉತ್ಪಾದಕ ಸಂಘಗಳ ಸಿಬ್ಬಂದಿಗೆ ಕಾರ್ಯಾಗಾರ ನಡೆಸಲಾಗುತ್ತಿದೆ’ ಎಂದರು.

ಕಾರ್ಯಾಗಾರ ಇಂದು: ನಗರದ ಧನ್ವಂತರಿ ರಸ್ತೆಯಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಆ.20ರ ಬೆಳಿಗ್ಗೆ 10ಕ್ಕೆ ಕಾರ್ಯಾಗಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT