ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೆ ಐದು ವಿಕೆಟ್‌ ಗೆಲುವು

ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿ
Last Updated 4 ಜನವರಿ 2019, 17:41 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ತಂಡ ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ 23 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿತು.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 229 ರನ್‌ಗಳ ಗುರಿ ಬೆನ್ನಟ್ಟಿದ ತಂಡವು ಶುಕ್ರವಾರ 87.4 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 234 ರನ್‌ ಗಳಿಸಿ ಗೆದ್ದಿತು.

ಗುರುವಾರದ ಆಟದ ಅಂತ್ಯಕ್ಕೆ ಒಂದು ವಿಕೆಟ್‌ಗೆ 164 ರನ್‌ ಗಳಿಸಿದ್ದ ಕರ್ನಾಟಕ ತಂಡ ಅಂತಿಮ ದಿನದಾಟದ ಮೊದಲ ಅವಧಿಯಲ್ಲಿ ಗೆಲುವಿನ ವ್ಯವಹಾರ ಪೂರ್ಣಗೊಳಿಸಿತು. ಲವ ನೀತ್‌ ಸಿಸೋಡಿಯಾ (93) ಮತ್ತು ಸುಜಿತ್‌ ಎನ್‌.ಗೌಡ (86) ಎರಡನೇ ವಿಕೆಟ್‌ಗೆ 171 ರನ್‌ ಸೇರಿಸಿದರು. ಇಬ್ಬರೂ ಶತಕ ಗಳಿಸುವ ಅವಕಾಶ ಕಳೆದುಕೊಂಡರು.

ಒಂದು ವಿಕೆಟ್‌ಗೆ 187 ರನ್‌ ಗಳಿಸಿದ್ದ ಕರ್ನಾಟಕ ಮುಂದಿನ 32 ರನ್‌ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಒಳಗಾಯಿತು. ಆದರೆ ಶ್ರೀಜಿತ್‌ ಮತ್ತು ಮನೋಜ್‌ ಭಾಂಡಗೆ ತಾಳ್ಮೆಯ ಆಟವಾಡಿ ಜಯ ತಂದಿತ್ತರು.

ಸಂಕ್ಷಿಪ್ತ ಸ್ಕೋರ್‌: ತಮಿಳುನಾಡು ಮೊದಲ ಇನಿಂಗ್ಸ್‌: 42.2 ಓವರ್‌ಗಳಲ್ಲಿ 94 ಮತ್ತು ಎರಡನೇ ಇನಿಂಗ್ಸ್ 85.2 ಓವರ್‌ಗಳಲ್ಲಿ 259. ಕರ್ನಾಟಕ ಮೊದಲ ಇನಿಂಗ್ಸ್ 66.2 ಓವರ್‌ಗಳಲ್ಲಿ 120 ಮತ್ತು ಎರಡನೇ ಇನಿಂಗ್ಸ್ 87.4 ಓವರ್‌ಗಳಲ್ಲಿ 5 ವಿಕೆಟ್‌ಗೆ 234 (ಲವನೀತ್‌ ಸಿಸೋಡಿಯಾ 93, ಸುಜಿತ್‌ ಎನ್‌.ಗೌಡ 86, ಕೆ.ಎಲ್‌.ಶ್ರೀಜಿತ್‌ ಔಟಾಗದೆ 22, ಮನೋಜ್ ಭಾಂಡಗೆ ಔಟಾಗದೆ 10) ಫಲಿತಾಂಶ: ಕರ್ನಾಟಕಕ್ಕೆ 5 ವಿಕೆಟ್‌ ಗೆಲುವು ಹಾಗೂ 6 ಪಾಯಿಂಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT